ಸ್ವಚ್ಛತೆಗೆ ಕೈ ಜೋಡಿಸಲು ಮನವಿ

ದಾವಣಗೆರೆ, ಡಿ. 13- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ನಿರ್ವಹಣೆ ವ್ಯವಸ್ಥೆಯನ್ನು ಉತ್ತಮಗೊಳಿಸುವ ಸಲುವಾಗಿ ಎಲ್ಲಾ ಆರೋಗ್ಯ ನಿರೀಕ್ಷಕರುಗಳು ತಮಗೆ ಸಂಬಂಧಿಸಿದ ವಾರ್ಡ್‌ಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವಿಕೆ, ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಗಳ ಬಳಕೆ, ತ್ಯಾಜ್ಯ ವಿಂಗಡಣೆ ಮಾಡದೇ ಸಂಬಂಧಿಸಿದ ಬೀದಿ ಬದಿ ವ್ಯಾಪಾರಸ್ಥರು  ಅಗತ್ಯ ಕಸದ ಬುಟ್ಟಿಗಳನ್ನಿರಿಸಿ ತ್ಯಾಜ್ಯ ವಿಂಗಡಿಸಲು ವಿಫಲರಾಗಿದ್ದಾರೆ.

ಇತರೆ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಪಿಓಎಸ್ ಮಷಿನ್ ಗಳ ಮೂಲಕ ದಂಡ ವಿಧಿಸಲು ಆರಂಭಿಸಲಾಗುತ್ತಿದೆ. ಸಾರ್ವಜನಿಕರು ಸ್ಥಳದಲ್ಲೇ ದಂಡ ವಿಧಿಸಲು ಪೂರಕವಾಗುವಂತೆ ಯಪಿಐ, ಡೆಬಿಟ್ ಕಾರ್ಡ್ ನಗದು, ಮೂಲಕ ಹಣ ಪಾವತಿಸುವ ತಂತ್ರಾಂಶಗಳನ್ನು ಒಳಗೊಂಡು ಪಿಒಎಸ್ ಮಷೀನ್‌ಗಳನ್ನು ಆರೋಗ್ಯ ನಿರೀಕ್ಷಕರಿಗೆ ಒದಗಿಸಲಾಗಿದೆ.

1-12- 23 ರಿಂದ ಇಲ್ಲಿಯವರೆಗೆ 350 ಉಲ್ಲಂಘನೆಯದಾರರಿಂದ 122447ರೂ. ದಂಡ ವಸೂಲಿಯಾಗಿರುತ್ತದೆ. ಸಾರ್ವಜನಿಕರು, ಉದ್ದಿಮೆ ದಾರರು ತಮ್ಮಲ್ಲಿ ಉತ್ಪಾದಿಸಿದ ತ್ಯಾಜ್ಯವನ್ನು ಖಾಲಿ ನಿವೇಶನ, ಚರಂಡಿ, ರಸ್ತೆ, ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯದೇ ಮೂಲದಲ್ಲಿಯೇ ಹಸಿ, ಒಣ, ಸ್ಯಾನಿಟರಿ ತ್ಯಾಜ್ಯಗಳಿಗೆ ವಿಂಗಡಿಸಿ ಪಾಲಿಕೆಯ ತ್ಯಾಜ್ಯ ವಿಂಗಡನಾ ವಾಹನ ಗಳಿಗೆ ನೀಡುವಂತೆ ಹಾಗು ಏಕ ಬಳಕೆ ಪ್ಲಾಸ್ಟಿಕ್ ಬಳಕೆಯನ್ನು ನಿರಾಕರಿಸುವ ಮೂಲಕ ನಗರ ಸ್ವಚ್ಛತೆಯೊಂದಿಗೆ ಕೈ ಜೋಡಿಸಲು ಮನವಿ ಮಾಡಲಾಗಿದೆ.  

error: Content is protected !!