ದಾವಣಗೆರೆ, ಡಿ.12- ಬೆಳಗಾವಿ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ವಕೀಲರ ರಕ್ಷಣಾ ಕಾಯ್ದೆ ಮಂಡಿಸಿರುವುದು ವಕೀಲ ವೃಂದದಲ್ಲಿ ಸಂತಸ ತಂದಿದೆ. ಆದಷ್ಟು ಬೇಗ ಅಧಿವೇಶನದಲ್ಲಿ ಅನುಮೋದನೆಯಾಗಿ ಸಂವಿಧಾನಾತ್ಮಕವಾಗಿ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಬರಲಿ ಎಂದು ವಕೀಲರೂ ಆಗಿರುವ ದೂಡಾ ಮಾಜಿ ಅಧ್ಯಕ್ಷ ಪ್ರಕಾಶ್ ಆಶಿಸಿದ್ದಾರೆ. ವಕೀಲರ ರಕ್ಷಣೆಗಾಗಿ ಮಸೂದೆ ಮಂಡಿಸಿರುವ ರಾಜ್ಯ ಸರ್ಕಾರದ ನಡೆಗೆ ಹಾಗೂ ಮೈಸೂರು ವಕೀಲರ ಸಮ್ಮೇಳನದಲ್ಲಿ ಮೂಲತಃ ವಕೀಲರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ವಾಗ್ದಾನ ನೀಡಿ ದಂತೆ ಮಂಡಿಸಿರುವದನ್ನು ಪ್ರಕಾಶ್ ಸ್ವಾಗತಿಸಿದ್ದಾರೆ.
February 3, 2025