ಖೋ-ಖೋ ಪಂದ್ಯಾವಳಿಗೆ ಆಯ್ಕೆ

ಖೋ-ಖೋ ಪಂದ್ಯಾವಳಿಗೆ ಆಯ್ಕೆ

ದಾವಣಗೆರೆ, ಡಿ.12- ಮಹಾರಾಷ್ಟ್ರದ ನಾಸಿಕ್‍ನಲ್ಲಿ ನಡೆಯುವ ಯು-19 ರಾಷ್ಟ್ರ ಮಟ್ಟದ ಪದವಿ ಪೂರ್ವ ಕಾಲೇಜುಗಳ ಖೋ-ಖೋ ಪಂದ್ಯಾವಳಿಗೆ ನಗರದಲ್ಲಿರುವ ಕ್ರೀಡಾ ವಸತಿ ನಿಲಯದ 5 ಜನ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

19 ವರ್ಷದೊಳಗಿನ ಬಾಲಕ, ಬಾಲಕಿಯರ ರಾಷ್ಟ್ರ ಮಟ್ಟದ ಪದವಿ ಪೂರ್ವ ಕಾಲೇಜುಗಳ ಖೋ-ಖೋ ಪಂದ್ಯಾವಳಿಯು ನಾಳೆ ದಿನಾಂಕ 13 ರಿಂದ 17ರ ವರೆಗೆ ನಡೆಯಲಿದ್ದು,  ನಗರದ ಕ್ರೀಡಾ ವಸತಿ ನಿಲಯದ ಖೋ-ಖೋ ಕ್ರೀಡಾಪಟುಗಳಾದ ಹುಲುಗಪ್ಪ, ನಿಖಿಲ್, ಪಂಕಜ್, ಕರಿಬಸಪ್ಪ ಮತ್ತು ವೆಂಕಟೇಶ್ ಪಂದ್ಯಾವಳಿಯಲ್ಲಿ ಭಾಗವಹಿಸುವರು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಆರ್.ಜಯಲಕ್ಷ್ಮಿಬಾಯಿ ತಿಳಿಸಿದ್ದಾರೆ.

error: Content is protected !!