ಚನ್ನಗಿರಿ,ಡಿ. 11- ತಾಲ್ಲೂಕಿನ ಮತ್ತಿ ಗ್ರಾಮದ ಬಳಿ ತ್ಯಾವಣಿಗೆ ಕಡೆಗೆ ರಸ್ತೆಯ ಮೂಲಕ ನಡೆದುಕೊಂಡು ಹೋಗುತ್ತಿದ್ದ 55 ರಿಂದ 60 ವರ್ಷದ ಅನಾಮಧೇಯ ವ್ಯಕ್ತಿಗೆ ದಾವಣಗೆರೆ ಕಡೆಯಿಂದ ಬರುತ್ತಿದ್ದ ಬೈಕ್ ಸವಾರನೊಬ್ಬ ಡಿಕ್ಕಿಪಡಿಸಿದ ಪರಿಣಾಮ ಆತ ಗಾಯಗೊಂಡಿದ್ದ. ನಗರದ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆ ವ್ಯಕ್ತಿ ಮೊನ್ನೆ ಮೃತಪಟ್ಟಿದ್ದಾನೆ.
ಕೋಲು ಮುಖ, ತೆಳ್ಳನೆಯ ಮೈಕಟ್ಟು ಹಾಗೂ ಗೋಧಿ ಬಣ್ಣ ಹೊಂದಿದ್ದು, ಬಿಳಿ ಮತ್ತು ನೀಲಿ ಬಣ್ಣಗಳ ದಪ್ಪಗೆರೆಗಳಿರುವ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಸಂಬಂಧಪಟ್ಟವರು ಹದಡಿ ಪೊಲೀಸ್ ಠಾಣೆ (08192-218405) ಯನ್ನು ಸಂಪರ್ಕಿಸಬಹುದು.