ಇಂದು ಆದಿನಾಥ ಜಿನಮಂದಿರದ ದಶಮಾನೋತ್ಸವ

ಭಗವಾನ್‌ ಶ್ರೀ 1008 ಕಲ್ಪದ್ರುಮ ಆದಿನಾಥ ಜಿನಮಂದಿರದ ದಶಮಾನೋತ್ಸವ ಸಂಭ್ರಮ ಹಾಗೂ ಶ್ರೀ ಮಹಾವೀರ ಸಂಘದ ಸುವರ್ಣ ಮಹೋತ್ಸವ ಸಂಭ್ರಮ ಇಂದು ನಡೆಯಲಿದೆ. ಬೆಳಿಗ್ಗೆ 7 ಕ್ಕೆ ನಿತ್ಯಾಭಿಷೇಕ ಪೂಜೆ ನಡೆಯುವುದು. ಮಧ್ಯಾಹ್ನ 12 ಕ್ಕೆ ಭವ್ಯ ಮೆರವಣಿಗೆ ಶ್ರೀ ಆದಿನಾಥ ಜಿನಮಂದಿರದಿಂದ ಹೊರಟು   ರಾಜ ಬೀದಿಗಳಲ್ಲಿ ಸಂಚರಿಸಿ, ಕುವೆಂಪು ಕನ್ನಡ ಭವನದವರೆಗೆ ಬೆಳ್ಳಿ ರಥ, ಆನೆ ಕುದುರೆ ವಿವಿಧ ವಾದ್ಯಗಳೊಂದಿಗೆ ವೈಭವೋಪೇತವಾಗಿ ಶ್ರೀ ವಿಹಾರ ನಡೆಯುವುದು. 

ಮಧ್ಯಾಹ್ನ 2.30 ಕ್ಕೆ ಕುವೆಂಪು ಕನ್ನಡ ಭವನದಲ್ಲಿ ಭಗವಾನ್‌ ಶ್ರೀ 1008 ಕಲ್ಪದ್ರುವ ಆದಿನಾಥ ಜಿನಮಂ ದಿರದ ದಶಮಾನೋತ್ಸವ ಸಂಭ್ರಮ ಹಾಗೂ ಶ್ರೀ ಮಹಾವೀರ ಸಂಘದ ಸುವರ್ಣ ಮಹೋತ್ಸವ ಸಂಭ್ರ ಮದ ಅಂಗವಾಗಿ ಸಭಾ ಕಾರ್ಯಕ್ರಮ ನಡೆಯುವುದು. 

ಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ (ಕನಕಗಿರಿ), ಶ್ರೀ ಧವಳಕೀರ್ತಿ ಭಟ್ಟಾರಕ  ಸ್ವಾಮೀಜಿ (ಅರಹಂತಗಿರಿ), ಶ್ರೀ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ  ಸ್ವಾಮೀಜಿ (ಹೊಂಬುಜ), ಶ್ರೀ ಭಟ್ಟಾಕಲಂಕ ಭಟ್ಟಾರಕ  ಸ್ವಾಮೀಜಿ (ಸೋಂದ), ಶ್ರೀ ಲಕ್ಷ್ಮೀಸೇನ ಭಟ್ಟಾಕಲಂಕ ಭಟ್ಟಾರಕ  ಸ್ವಾಮೀಜಿ (ನರಸಿಂಹ ರಾಜಪುರ), ಸ್ವಸ್ತಿಶ್ರೀ ಸಿದ್ಧಾಂತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ  ಸ್ವಾಮೀಜಿ (ಅರೆತಿಪುರ) ಇವರುಗಳು ಪಾವನ ಸಾನ್ನಿಧ್ಯ ವಹಿಸುವರು.

ಅಧ್ಯಕ್ಷತೆಯನ್ನು ಅಜಿತ್‌ ಕುಮಾರ್‌ ಬಿ.ಎಸ್‌. ವಹಿಸುವರು. ಮುಖ್ಯ ಅತಿಥಿಗಳಾಗಿ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಡಿ. ಸುಧಾಕರ್‌, ಡಾ. ಶಾಮನೂರು ಶಿವಶಂಕರಪ್ಪ, ಡಾ. ಜಿ.ಎಂ. ಸಿದ್ದೇಶ್ವರ್, ಹೆಚ್‌.ಎಸ್‌. ಶಿವಶಂಕರ್‌, ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್, ಬಿ. ಪ್ರಸನ್ನಯ್ಯ, ಎಂ.ಎ. ಸುದರ್ಶನ ಕುಮಾರ್‌, ಮಂಜುನಾಥ್‌ ಗಡಿಗುಡಾಳ್ ಆಗಮಿಸುವರು. 

error: Content is protected !!