ದಾವಣಗೆರೆ, ಡಿ.10- ತನ್ನ ಕುಟುಂಬದೊಂದಿಗೆ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಪಾರ್ಕ್ ನೋಡಲು ಹೊರಟಿದ್ದ ಬೈಕ್ ಸವಾರನಿಗೆ ಹಿಂಬದಿ ಯಿಂದ ಮಹೀಂದ್ರಾ ವಾಹನವು ಡಿಕ್ಕಿ ಹೊಡೆದ ಪರಿಣಾಮ ಆತ ಸಾವಿಗೀಡಾಗಿರುವ ಘಟನೆ ನಡೆದಿದೆ. ಗ್ರಂಥಾಲಯದಲ್ಲಿ ಅಟೆಂಡರ್ ಆಗಿದ್ದ ಕೆಟಿಜೆ ನಗರದ ಷಫೀವುಲ್ಲಾ ಅವರು ತನ್ನ ಹೆಂಡತಿ ರೇಷ್ಮಾ, ಮಕ್ಕಳಾದ ಆಪೀಯಾ, ಆಸ್ಮೀಯಾ ಅವರುಗಳನ್ನು ಕರೆದುಕೊಂಡು ತನ್ನ ದ್ವಿಚಕ್ರ ವಾಹನ ಆಕ್ಟಿವಾ ಹೊಂಡಾದಲ್ಲಿ ಮಧ್ಯಾಹ್ನ 2.30 ರ ಸಮಯದಲ್ಲಿ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ತೀವ್ರ ಗಾಯಗೊಂಡಿದ್ದ ಶಫೀವುಲ್ಲಾ ಅವರನ್ನು ಎಸ್ಸೆಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಫೀವುಲ್ಲಾ ಮೃತಪಟ್ಟಿದ್ದಾರೆ. ಹೆಂಡತಿ ಹಾಗೂ ಮಕ್ಕಳು ಸ್ಥಿತಿ ಗಂಭೀರವಾಗಿದೆ.
January 11, 2025