ದಾವಣಗೆರೆ, ಡಿ. 10 – ಕೇರಳ ರಾಜ್ಯದ ಸಿಪಿಐ ರಾಜ್ಯ ಕಾರ್ಯದರ್ಶಿ ಕಾಮ್ರೆಡ್ ಕಾನಮ್ ರಾಜೇಂದ್ರನ್ ನಿಧನಕ್ಕೆ ಸಿಪಿಐ ದಾವಣಗೆರೆ ಜಿಲ್ಲಾ ಮಂಡಳಿ ಸಂತಾಪ ಸೂಚಿಸಿದೆ.
ಶನಿವಾರ ಕಾಂ. ಪಂಪಾಪತಿ ಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ರಾಜೇಂದ್ರನ್ ರವರಿಗೆ ಸಂತಾಪ ಸೂಚಿಸಿ, ಕೇರಳ ರಾಜ್ಯದಲ್ಲಿ ರೈತರು ಮತ್ತು ಕಾರ್ಮಿಕರನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಜೇಂದ್ರನ್ ಅವರು ಪಕ್ಷದ ಎಲ್ಲಾ ಸಾಮೂಹಿಕ ಸಂಘಟನೆಗಳಲ್ಲಿ ವಿವಿಧ ಸ್ಥಾನಗಳನ್ನು ವಹಿಸಿ ಕೆಲಸ ನಿರ್ವಹಿಸಿದ್ದರು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಹೇಳಿದರು. ಕಾಂ ರಾಜೇಂದ್ರನ್ ನಿಧನದಿಂದ ದುಡಿಯುವ ಜನರಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಿಪಿಐ ಜಿಲ್ಲಾ ಖಜಾಂಚಿ ಆನಂದ ರಾಜ್ ಮತ್ತು ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಹೆಚ್.ಜಿ. ಉಮೇಶ್ ಹೇಳಿದರು.
ಸಂತಾಪ ಸಭೆಯಲ್ಲಿ ಟಿ.ಎಸ್. ನಾಗರಾಜ್, ಆ ವರಗೆರೆ ವಾಸು, ನಿಟುವಳ್ಳಿ ಬಸವರಾಜ್, ಎನ್.ಎಚ್. ರಾಮಣ್ಣ, ಯಲ್ಲಪ್ಪ, ಸರೋಜ, ಶಾರದಮ್ಮ, ಪದ್ಮಾ, ಎ.ತಿಪ್ಪೇಶ್, ಸಿ.ರಮೇಶ್ ಮತ್ತಿತರರು ಭಾಗವಹಿಸಿದ್ದರು.