ನಗರದಲ್ಲಿ ಇಂದು ಕೃತಿ ಲೋಕಾರ್ಪಣೆ

ನಿವೃತ್ತ ಶಿಕ್ಷಕಿ ಜಿ.ಎನ್. ಕಮಲಮ್ಮ ಚಂದ್ರಪ್ಪ ಅವರ ಸುಪುತ್ರಿ ಮತ್ತು ಕವಯತ್ರಿ ಲಿಂಗೈಕ್ಯ ಕು. ಜಿ.ಕೆ ಕಾವ್ಯ ಅವರ ಪ್ರಥಮ ವರ್ಷದ ಪುಣ್ಯಾರಾಧನೆ ಅಂಗವಾಗಿ ಇಂದು ಬೆಳಗ್ಗೆ 11 ಗಂಟೆಗೆ ಶ್ರೀಮತಿ ರಾಜನಹಳ್ಳಿ ಜಾನುಬಾಯಿ ಶ್ರೀನಿವಾಸ ಮೂರ್ತಿಯವರ ಧರ್ಮಶಾಲೆಯಲ್ಲಿ ಸರ್ವಶರಣ ಸಮ್ಮೇಳನ ಹಾಗೂ ಲಿಂ . ಜಿ .ಕೆ ಕಾವ್ಯ ಅವರ ರಚನೆಯ `ಕಾವ್ಯ – ಕನ್ನಿಕೆ’ ಕವನ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಪಾಂಡುಮಟ್ಟಿ ವಿರಕ್ತ ಮಠದ ಡಾ. ಶ್ರೀ ಗುರುಬಸವ ಸ್ವಾಮೀಜಿ,   ಜಡೆಸಿದ್ದ ಶಿವಯೋಗೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ವಹಿಸುವರು. ಪತ್ರಕರ್ತ ಹುಬ್ಬಳ್ಳಿಯ ರಾಜೇಂದ್ರ ಪಾಟೀಲ್ ಅವರು ಕಾವ್ಯ ಕನ್ನಿಕೆ ಕವನ ಸಂಕಲನ ಬಿಡುಗಡೆ ಮಾಡುವರು. 

ಮುಖ್ಯ ಅತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್ ಮಲ್ಲಿಕಾರ್ಜುನ, ಶ್ರೀಮತಿ ಪ್ರಭಾ ಎಸ್. ಎಸ್ ಮಲ್ಲಿಕಾರ್ಜುನ್, ಚಿತ್ರದುರ್ಗದ ರಾಜಯೋಗಿನಿ ಬ್ರಹ್ಮಾಕುಮಾರಿ ರಶ್ಮಿ, ಸಾಹಿತಿ ಎಸ್.ಟಿ. ಶಾಂತಗಂಗಾಧರ ಅವರುಗಳು ಭಾಗವಹಿಸುವರು.

ಕುಶಾಲ್ ಕೆ.ವಿ. ವಚನ ಗೀತೆ ಹಾಡುವರು.  ಶ್ರೀಮತಿ ಶ್ವೇತಾ ಜಿ.ಆರ್, ಗಂಗಾಧರ ಬಿ.ಎಲ್ ನಿಟ್ಟೂರು, ಶ್ರೀಮತಿ ಜಿ.ಎನ್ ಕಮಲಮ್ಮ, ಶ್ರೀಮತಿ ಸುಧಾ, ಶ್ರೀಮತಿ ರಾಣಿ ಅವರು ಕಾರ್ಯಕ್ರಮ ನಿರ್ವಹಿಸುವರು.

error: Content is protected !!