ಬಿಐಇಟಿಯಲ್ಲಿ ಇಂದು ಅಂತರರಾಷ್ಟ್ರೀಯ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನದ `ಸವಿನೆನಪು’

ದಾವಣಗೆರೆ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ `ಸವಿನೆನಪು’ ಅಂತರರಾಷ್ಟ್ರೀಯ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು ಮಧ್ಯಾಹ್ನ 2.30 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸುಮಾರು 1000 ಹಿರಿಯ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್.ಬಿ. ಅರವಿಂದ್ ತಿಳಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕ ಆರ್. ಗಿರೀಶ್, ಹೈದರಾಬಾದ್ ಅರಬಿಂದೊ ಫಾರ್ಮ್ ನಿರ್ದೇಶಕ ಸತಕರ್ಣಿ ಮಕ್ಕಾಪತಿ, ಯುಎಸ್ಎ ಎಸ್. ಎ. ಪಿ. ಲಿಮೋಸ್ ಎಂಟರ್‌ ಪ್ರೈಸ್ ನಿರ್ದೇಶಕ ಆನಂದ ಕುಮಾರ ಎನ್. ಎಸ್. ಲೋಕೋಪಯೋಗಿ ಇಲಾಖೆ, ಕೇಂದ್ರ ವಲಯ, ಶಿವಮೊಗ್ಗದ ಮುಖ್ಯ ಇಂಜಿನಿಯರ್ ಬಿ. ವಿ. ಜಗದೀಶ್‌ ಭಾಗವಹಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಬಿ.ಐ.ಇ.ಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ವಹಿಸುವರು. ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್.ಬಿ. ಅರವಿಂದ ಕಾಲೇಜಿನ ಪಕ್ಷಿನೋಟದ ವಿವರಣೆ ನೀಡುವರು.

ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಡಾ. ದೇವೇಂದ್ರಪ್ಪ ಕೆ. ಸಿ. ಮತ್ತು ಇತರರು ಭಾಗವಹಿಸುವರು.

error: Content is protected !!