ನಗರದಲ್ಲಿ ಇಂದು- ನಾಳೆ ಮಹಾವೀರ ಸಂಘದ ಸುವರ್ಣ ಮಹೋತ್ಸವ

ದಾವಣಗೆರೆ, ಡಿ.8- ನಗರದ ಕುವೆಂಪು ಕನ್ನಡ ಭವನದಲ್ಲಿ ನಾಳೆ ದಿನಾಂಕ 9 ಮತ್ತು 10 ರಂದು ಶ್ರೀ ಮಹಾವೀರ ಸಂಘದಿಂದ ಶ್ರೀ ಕಲ್ಪಧ್ರುವ ಆದಿನಾಥ ಜಿನಮಂದಿರದ ದಶಮಾನೋತ್ಸವ ಹಾಗೂ ಶ್ರೀ ಮಹಾವೀರ ಸಂಘದ ಸುವರ್ಣ ಮಹೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಡಿ. ಸುನೀಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಳೆ ದಿನಾಂಕ 9 ರಂದು ಬೆಳಿಗ್ಗೆ 8 ಗಂಟೆೆಗೆ ಧ್ವಜಾರೋಹಣ, 8.45 ಕ್ಕೆ ಏಕಕಾಲದಲ್ಲಿ 24 ತೀರ್ಥಂಕರರಿಗೆ ವಿಶೇಷ ಕಲ್ಪಧ್ರುವ ಮಹಾಭಿಷೇಕ ಪೂಜೆ, 10.30 ಕ್ಕೆ ಶ್ರೀ ಭಕ್ತಮಠ ಆರಾಧನಾ ಪೂಜೆಯು ಸಮಸ್ತ ಶ್ರಾವಕ-ಶ್ರಾವಕಿಯರಿಂದ ನಡೆಯಲಿದೆ.

ಅಂದು ಮಧ್ಯಾಹ್ನ 2.30 ಕ್ಕೆ ಕುವೆಂಪು ಕನ್ನಡ ಭವನದಲ್ಲಿ ದಶಮಾನೋತ್ಸವ ಹಾಗೂ ಶ್ರೀ ಮಹಾವೀರ ಸಂಘದ ಸುವರ್ಣ ಮಹೋತ್ಸವದಲ್ಲಿ ಶ್ರೀ ಭುವನಕೀರ್ತಿ ಸ್ವಾಮೀಜಿ, ಧವಳಕೀರ್ತಿ ಭಟ್ಟಾರಕ ಸ್ವಾಮೀಜಿ, ದೇವೇಂದ್ರ ಕೀರ್ತಿ ಸ್ವಾಮೀಜಿ, ಭಟ್ಟಾಕಲಂಕ ಭಟ್ಟಾರಕ ಶ್ರೀ, ಸಿದ್ಧಾಂತ ಕೀರ್ತಿ ಭಟ್ಟಾರಕ ಶ್ರೀಗಳು ಸಾನ್ನಿಧ್ಯ ವಹಿಸುವರು.

ಸಂಘದ ಉಪಾಧ್ಯಕ್ಷ ಎಸ್.ಬಿ. ಜಿನದತ್ತ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಪದ್ಮಾಂಬ ಮಹಿಳಾ ಸಮಾಜದ ಅಧ್ಯಕ್ಷೆ ಶ್ರೀಮತಿ ವರ್ಷ ಹೂಲಿ, ಆದಿನಾಥ ಜೈನ್ ಮಿಲನ್ ಅಧ್ಯಕ್ಷೆ ಶ್ರೀಮತಿ ಪ್ರವೀಣ ಸುದರ್ಶನ್, ದಾವಣಗೆರೆ ಜೈನ್ ಮಿಲನ್ ಅಧ್ಯಕ್ಷ ವಿ.ಎ. ಶಾಂತರಾಜು, ಶ್ರೀ ಪಾರ್ಶ್ವನಾಥ ಟೆಂಪಲ್ ಟ್ರಸ್ಟ್ ಅಧ್ಯಕ್ಷ ಪಿ.ಬಿ. ಪ್ರಕಾಶ್, ಶ್ರೀ ಮಹಾವೀರ ಯುವ ಮಂಚ್ ಅಧ್ಯಕ್ಷ ಬಿ.ಎಸ್. ಜಿತೇಂದ್ರಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ.

ನಾಡಿದ್ದು ದಿನಾಂಕ 10 ರಂದು ಬೆಳಿಗ್ಗೆ ಧಾರ್ಮಿಕ ಸಮಾರಂಭಗಳು ನಡೆಯಲಿದ್ದು, ಮಧ್ಯಾಹ್ನ 2.30 ಕ್ಕೆ ಜರುಗುವ ಸಮಾರಂಭದಲ್ಲಿ ಎಲ್ಲಾ ಭಟ್ಟಾರಕ ಸ್ವಾಮೀಜಿಗಳು ಸಾನ್ನಿಧ್ಯವ ವಹಿಸುವರು. ಮಹಾವೀರ ಸಂಘದ ಅಧ್ಯಕ್ಷ ಬಿ.ಎಸ್. ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಜೈನ್ ಮಿಲನ್ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷ ನವದೆಹಲಿಯ ಧರ್ಮಸ್ಥಳದ ಸುರೇಂದ್ರಕುಮಾರ್, ಬೆಂಗಳೂರಿನ ಕರ್ನಾಟಕ ಜೈನ್ ಅಸೋಸಿಯೇಷನ್ ಅಧ್ಯಕ್ಷರಾದ ಬಿ. ಪ್ರಸನ್ನಯ್ಯ, ಮಹಾವೀರ ಸಂಘದ ಗೌರವ ಅಧ್ಯಕ್ಷ ಎಂ.ಎ. ಸುದರ್ಶನ್ ಕುಮಾರ್, ಪಾಲಿಕೆಯ ಸದಸ್ಯ ಮಂಜುನಾಥ್ ಗಡಿಗುಡಾಳ್ ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಿ.ಎಸ್. ಅಜಿತ್ ಕುಮಾರ್, ಸುದರ್ಶನಕುಮಾರ್, ಎನ್.ಬಿ. ಜಿನದತ್ತ, ಚಂದ್ರಪ್ರಭು ಧರಣೇಂದ್ರ ಪ್ರಸಾದ್, ಕೋಮಲ್, ಪ್ರಶಾಂತ್, ಪ್ರೀತಮ್ ಉಪಸ್ಥಿತರಿದ್ದರು. 

error: Content is protected !!