ದಾವಣಗೆರೆ, ಡಿ.2- ದಾವಣಗೆರೆ ರೌಂಡ್ ಟೇಬಲ್ -76 ವತಿಯಿಂದ ಪರಿಸರ ಜಾಗೃತಿಗಾಗಿ ನಾಳೆ ದಿನಾಂಕ 3ರ ಭಾನುವಾರ ಬೆಳಿಗ್ಗೆ 10ರಿಂದ 12 ರವರೆಗೆ ಎಲೆಕ್ಟ್ರಿಕ್ ವಾಹನಗಳ ರ‍್ಯಾಲಿ ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅಭಿಷೇಕ್. ಶೇಟ್ ತಿಳಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಲಿಯು ನಗರದ ಹೈಸ್ಕೂಲ್ ಮೈದಾನದಿಂದ ಆರಂಭಗೊಳ್ಳಲಿದೆ ಎಂದರು. ಶಂಕರ್‌ಮೂರ್ತಿ, ಸುಹಾಸ್ ದತ್ತಾತ್ರೇಯ, ಎನ್. ಸುಹಾಸ್, ಆದಿತ್ಯ, ಮಾಧುರಿ ಸುಹಾಸ್, ತೇಜಸ್ವಿನಿ ಪತ್ರಿಕಾಗೋಷ್ಠಿಯಲ್ಲಿದರು.
March 1, 2025