ದಾವಣಗೆರೆ, ಡಿ. 7- ರಜಪೂತ್ ಕರ್ಣಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಸುಖ್‌ದೇವ್ ಸಿಂಗ್ ಗೋಗಾಮೆಡಿ ಹತ್ಯೆ ಖಂಡಿಸಿ ಜಿಲ್ಲಾ ರಜಪೂತ್ ಮಹಾಸಭಾ ಹಾಗೂ ವಿಷ್ಣು ಸಮಾಜ ದಿಂದ ನಾಳೆ ದಿನಾಂಕ 8 ರ ಶುಕ್ರವಾರ ಬೆಳಿಗ್ಗೆ 11 ಕ್ಕೆ ಪ್ರತಿಭಟನೆ ನಡೆಸಲಾಗುವುದು ಎಂದು ಮಹಾ ಸಭಾ ಜಿಲ್ಲಾಧ್ಯಕ್ಷ ಜೆ.ಈಶ್ವರ್ ಸಿಂಗ್ ಕವಿತಾಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಖ್‌ದೇವ್ ಗೋಗಾಮೆಡಿ ಅವರನ್ನು ರಾಜಸ್ಥಾನದ ಜೈಪುರ ನಗರದ ಅವರ ನಿವಾಸದಲ್ಲಿ ದುಷ್ಕರ್ಮಿಗಳು ಮನೆಗೆ ನುಗ್ಗಿ ದೇಶಿ ಬಂದೂಕುಗಳಿಂದ ಗೋಲಿಬಾರ್ ಮಾಡಿ ಹತ್ಯೆಗೈದಿದ್ದಾರೆ. ಇದು ಅತ್ಯಂತ ಖಂಡನೀಯ ಎಂದರು.
ಸುದ್ದಿಗೋಷ್ಠಿಯಲ್ಲಿ ಗೋಪಾಲ್ ಸಿಂಗ್, ಮೂಲಸಿಂಗ್ ರಾಥೋಡ್, ಸೈತಾನ್ ಸಿಂಗ್, ಅಮರ್ ಸಿಂಗ್ ಭಾಟಿ, ಗಣಪತ್ ಸಿಂಗ್ ದೇವ್ಲಾ ಮತ್ತಿತರರಿದ್ದರು.