ದಾವಣಗೆರೆ, ನ. 7- ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಮಂಡಕ್ಕಿ ಭಟ್ಟಿ ಲೇ ಔಟ್ ವಾಸಿ ಮಹಮ್ಮದ್ ಸಲೀಂ (23) ಹಾಗೂ ಎಸ್.ಜೆ.ಎಂ. ನಗರದ ಸೈಯದ್ ಶೇರು (27) ಬಂಧಿತರು. ಇವರಿಂದ ಕಳುವಾಗಿದ್ದ 57 ಸಾವಿರ ರೂ. ಮೌಲ್ಯದ ಎಲ್‌ಇಡಿ ಟವಿ ಸೇರಿದಂತೆ ಹಾಗೂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವರಿಂದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ 2.50 ಲಕ್ಷ ರೂ. ಬೆಲೆಯ
44 ಗ್ರಾಂ ಚಿನ್ನದ ಗಟ್ಟಿ, ಕೃತ್ಯಕ್ಕೆ ಬಳಸಿದ ಬೈಕ್ ಸೇರಿ ಒಟ್ಟು 3.47 ಲಕ್ಷ ರೂ. ಮೌಲ್ಯದ ಮಾಲು ವಶಪಡಿಸಿಕೊಳ್ಳಲಾಗಿದೆ.
ಈ ಆರೋಪಿಗಳ ಪೈಕಿ ಮಹಮ್ಮದ್ ಸಲೀಂ ಮೇಲೆ ದಾವಣಗೆರೆ ಗಾಂಧಿನಗರ ಪೊಲೀಸ್ ಠಾಣೆ, ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಸೈಯದ್ ಶೇರು ವಿರುದ್ಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಹುಬ್ಬಳ್ಳಿ ರೈಲ್ವೇಸ್ ನಲ್ಲಿ ಪ್ರಕರಣಗಳು ದಾಖಲಾಗಿವೆ.
ಗ್ರಾಮಾಂತರ ಠಾಣೆಯ ಪಿ.ಐ ಕಿರಣ್ ಕುಮಾರ್ ಇ.ವೈ ನೇತೃತ್ವದಲ್ಲಿ ಮಂಜುನಾಥ ಎಸ್. ಕಲ್ಲೇದೇವರ ಸಹಕಾರದೊಂದಿಗೆ ಪಿಎಸ್‍ಐ ಹಾರೂನ್ ಅಖ್ತರ್ ಹಾಗೂ ಜೋವಿತ್ ರಾಜ್ ಮತ್ತು ಠಾಣಾ ಸಿಬ್ಬಂದಿಯವರಾದ ದೇವೇಂದ್ರನಾಯ್ಕ್, ಅಣ್ಣಯ್ಯ, ಮಹಮ್ಮದ್ ಯೂಸುಫ್ ಅತ್ತರ್, ವೀರೇಶ್ ರವರನ್ನೊಳಗೊಂಡ ತಂಡ ಆರೋಪಿತರ ಪತ್ತೆ ಹಾಗೂ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.