ಭಾವಸಾರ ಕ್ಷತ್ರಿಯ ದೈವ ಮಂಡಳಿ, ಭಜನಾ ಮಂಡಳಿ, ರುಖುಮಾಯಿ ಮಹಿಳಾ ಮಂಡಳಿ ಮತ್ತು ಕಲಾವತಿ ಮಹಿಳಾ ಮಂಡಳಿ ಹಾಗೂ ತರುಣ ಮಂಡಳಿ, ವಧು-ವರರ ಮಾಹಿತಿ ಕೇಂದ್ರ, ಬಿಬಿಐ ವತಿಯಿಂದ ಇಂದಿನಿಂದ 4 ದಿನಗಳ ಕಾಲ ಶ್ರೀ ವಿಠ್ಠಲ ರುಖುಮಾಯಿ ದೇವರ ದಿಂಡಿ ಉತ್ಸವ ಮತ್ತು ಶ್ರೀ ಸಂತ ಜ್ಞಾನೇಶ್ವರಿ ಮಹಾರಾಜರ ಸಮಾದಿ ಸೋಹಳ ಮಹೋತ್ಸವವನ್ನು ಮಹಾರಾಜ ಪೇಟೆಯಲ್ಲಿರುವ ಶ್ರೀ ವಿಠ್ಠಲ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಪಂಡರಪುರದ ಶ್ರೀ ಸದ್ಗುರು ಹರಿಭಕ್ತ ಪಾರಾಯಣ ವಾಸ್ಕರ್ ಮಹಾರಾಜ್ ಅವರ ಕೃಪಾಶೀರ್ವಾದದಿಂದ, ಪಂಡರಾಪುರದ ಶ್ರೀ ಗುರುವರ್ಯ ಹ.ಭ.ಪ. ಪ್ರಭಾಕರ್ ದಾದಾ ಬುವಾ ಬೋದಲೆ ಮಹಾರಾಜ್ ಅವರ ಸಾನ್ನಿಧ್ಯದಲ್ಲಿ ಈ ಮಹೋತ್ಸವ ನಡೆಯಲಿದೆ.
ಇಂದು ದಿಂಡಿ ಉತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾಹ್ನ 3 ಗಂಟೆಯಿಂದ ಸಂಜೆ 5ರವರೆಗೆ ಕಲಾವತಿ ಮಹಿಳಾ ಮಂಡಳಿಯವರಿಂದ ರಂಗೋಲಿ ಸ್ಪರ್ಧೆ, ಸಂಜೆ 6ರಿಂದ ಪೋತಿ ಸ್ಥಾಪನೆ, ಪಲ್ಲಕ್ಕಿ ಉತ್ಸವದೊಂದಿಗೆ ನಗರ ಪ್ರದಕ್ಷಣೆ ನಂತರ ಧ್ವಜ ಪೂಜೆ ನೆರವೇರಲಿದೆ. ರಾತ್ರಿ 8 ಗಂಟೆಯಿಂದ ಸತೀಶ್ ಮಾಂಡ್ರೆ ಲಕ್ಷ್ಮೇಶ್ವರ ಅವರಿಂದ ಕೀರ್ತನೆ ನಡೆಯಲಿದೆ. ಮಹಾಮಂಗಳಾರತಿ ಅಖಂಡ ವೀಣಾ ಜಾಗರಣೆ ನಡೆಯಲಿದೆ.