ಜಿಗಳಿ ಗ್ರಾ.ಪಂ ಕಛೇರಿ ಆವರಣದಲ್ಲಿ ಇಂದು ಮಧ್ಹಾಹ್ನ 2 ಗಂಟೆಗೆ ಉದ್ಯೋಗ ಖಾತ್ರಿ ಯೋಜನೆಯ 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ಗ್ರಾಮ ಸಭೆಯನ್ನು ಜಿ.ಪಂ. ಸಿಇಓ ಸುರೇಶ್ ಬಿ.ಇಟ್ನಾಳ್ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳ ಲಾಗಿದೆ. ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪಾ ಸೋಮ ಶೇಖರ್, ಉಪಾಧ್ಯಕ್ಷ ವೈ. ಚೇತನ್ ಕುಮಾರ್, ತಾ.ಪಂ. ಇಓ ರಾಮಕೃಷ್ಣಪ್ಪ, ತಾ.ಪಂ. ಸಹಾಯಕ ನಿರ್ದೇಶಕ ಜಿ.ಆರ್. ಸುನೀಲ್, ಜಿ.ಪಂ. ಎಇಇ ಬಿ.ಕೆ. ಗಿರೀಶ್ ಸೇರಿದಂತೆ ಇನ್ನಿತರರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆಂದು ಪಿಡಿಓ ಕೆ.ಎಸ್. ಉಮೇಶ್ ತಿಳಿಸಿದ್ದಾರೆ.
January 11, 2025