ದಾವಣಗೆರೆ, ಡಿ.6- ಶಿವಮೊಗ್ಗದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಇದೇ ದಿನಾಂಕ 16 ರಂದು ನಡೆಯಲಿರುವ `ವಿಜಯ ದಿವಸ’ದ ಅಂಗವಾಗಿ 1971ರ ಯುದ್ದದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮಾಜಿ ಸೈನಿಕರಿಂದ ಸನ್ಮಾನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಯುದ್ದದಲ್ಲಿ ಸಕ್ರಿಯವಾಗಿ ಭಾಗವಹಿಸಿದ ಮಾಜಿ ಸೈನಿಕರು ತಮ್ಮ ಮಾಜಿ ಸೈನಿಕ ಗುರುತಿನ ಚೀಟಿ ಮತ್ತು ಪೂರ್ವ ಅಥವಾ ಪಶ್ಚಿಮ ಮೆಡಲ್ಗಳನ್ನು ಹೊಂದಿರುವ ಸ್ವವಿವರಗಳನ್ನೊಳಗೊಂಡ ಮಾಹಿತಿಯನ್ನು [email protected] ಅಥವಾ ದೂ.08182-220925ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಶಿವಮೊಗ್ಗ ದೂ.08182-220925ಗೆ ಸಂಪರ್ಕಿಸಲು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಡಾ. ಸಿ.ಎ ಹಿರೇಮಠ್ ತಿಳಿಸಿದ್ದಾರೆ.