ದಾವಣಗೆರೆ, ಡಿ.5- ದಾವಣಗೆರೆ ಮತ್ತು ತೋಳಹುಣಸೆ ರೈಲು ನಿಲ್ದಾಣಗಳ ಮಧ್ಯೆ ಅಪರಿಚಿತ ವ್ಯಕ್ತಿಯ ಶವ ಸಿಕ್ಕಿದ್ದು, ಸುಮಾರು 35-40 ವರ್ಷದವನಾಗಿದ್ದು, ಸಧೃಡ ಮೈಕಟ್ಟು, ದುಂಡು ಮುಖ, ಗಿಡ್ಡ ಮೂಗು ಹೊಂದಿರುತ್ತಾನೆ. ಮೃತನ ಬಲ ಮೊಣಕೈ ಮೇಲೆ `ತಂದೆ-ತಾಯಿ ಆಶೀರ್ವಾದ’ ಎಂಬ ಹಚ್ಚೆ ಗುರುತು ಇದೆ. ಗ್ರೇ ಬಣ್ಣದ ಕಪ್ಪು ಮತ್ತು ಬಿಳಿ ಬಣ್ಣದ ಅಡ್ಡ ಪಟ್ಟಿ ಇರುವ ಅರ್ಧ ತೋಳಿನ ಟೀ-ಶರ್ಟ್, ಆಕಾಶ ನೀಲಿ ಬಣ್ಣದ ಶಾರ್ಟ್ಸ್, ಕೆಂಪು ಬಣ್ಣದ ಉಡಿದಾರ ಧರಿಸಿರುತ್ತಾನೆ. ಸಂಬಂಧಪಟ್ಟವರು ದಾವಣಗೆರೆ ರೈಲ್ವೆ ಪೊಲೀಸ್ ಠಾಣೆ (ದೂರ ವಾಣಿ 08192-259643 ಅಥವಾ 94808 00469, 94808 02123 ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ : 080-22871291) ಯನ್ನು ಸಂಪರ್ಕಿಸಬಹುದು.
December 23, 2024