ನಗರದ ಶ್ರೀ ಗೌರಮ್ಮಾಜಿ ಅಧ್ಯಾತ್ಮ ಮಂದಿರದಲ್ಲಿ ಇಂದು ಕಾರ್ತಿಕ

ಎಸ್.ಎಸ್.ಲೇ-ಔಟ್ `ಬಿ’ ಬ್ಲಾಕ್, ರಿಂಗ್‌ ರಸ್ತೆಯಲ್ಲಿರುವ ಶ್ರೀ  ಸ.ಸ. ಗೌರಮ್ಮಾಜಿ ಅಧ್ಯಾತ್ಮ ಮಂದಿರದಲ್ಲಿ  ಶ್ರೀ ಗೌರಮ್ಮಾಜಿ ಮಹಾರಾಜರ 28ನೇ ಜ್ಞಾನಯಜ್ಞ ಸಪ್ತಾಹ ಮತ್ತು ಕಾರ್ತಿಕ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಇಂದು ಬೆಳಿಗ್ಗೆ ಕಾಕಡಾರತಿ, ಪೂಜೆ, ಭಜನೆ ನಂತರ ಸಂಜೆ 4 ಗಂಟೆಯಿಂದ ಪೂಜ್ಯ ಮಾತೋಶ್ರಿ ಗೌರಮ್ಮಾಜಿ ಉತ್ಸವ ಭಾವಚಿತ್ರದ ಅಲಂಕೃತ  ಪಾಲಕಿಯ ಮೆರವಣಿಗೆ ಜರುಗಲಿದೆ. ರಾತ್ರಿ 10 ಗಂಟೆಗೆ ಕಾರ್ತಿಕ ದೀಪಗಳನ್ನು ಬೆಳಗಿಸಿ, ಜಾಗರಣೆ ಆಚರಿಸಲಾಗುವುದು.

ನಾಳೆ ಗುರುವಾರ ಬೆಳಗಿನ ಪೂಜಾದಿ ಕಾರ್ಯಕ್ರಮಗಳ ನಂತರ ಮಧ್ಯಾಹ್ನ  12 ಗಂಟೆಗೆ  ಮಾತೋಶ್ರೀಯವರ `ಪುಣ್ಯಸ್ಮರಣೆ’ ಮತ್ತು ಪುಷ್ಪವೃಷ್ಟಿಗೈಯ್ಯವ ಕಾರ್ಯಕ್ರಮವಿದೆ.

error: Content is protected !!