ನಗರದಲ್ಲಿ ಇಂದು `ಅಭಿರುಚಿ’ : ಇದು ಓದುಗರ ವೇದಿಕೆ

ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ಲೈಬ್ರರಿ ಮತ್ತು ಇನ್‌ಫರ್ಮೇಷನ್‌ ವಿಭಾಗದ ಆಶ್ರಯದಲ್ಲಿ `ಅಭಿರುಚಿ’ ಇದು ಓದುಗರ ವೇದಿಕೆ ಕಾರ್ಯಕ್ರಮವು  ಇಂದು ಬೆಳಿಗ್ಗೆ 11.30 ಕ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಲೈಬ್ರರಿಯನ್‌ ಡಾ. ಕೆ.ವಿ. ಮಂಜುನಾಥ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಡಾ. ಎಂ.ಜಿ. ಈಶ್ವರಪ್ಪ ಭಾಗವಹಿಸುವರು. ಪ್ರಾಂಶುಪಾಲ ರಾದ ಕಮಲಾ ಸೊಪ್ಪಿನ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಕೋ-ಆರ್ಡಿನೇಟರ್‌ ಮತ್ತು ವಿಭಾಗದ ಮುಖ್ಯಸ್ಥರಾದ ಆರ್‌.ಆರ್. ಶಿವಕುಮಾರ್‌ ಉಪಸ್ಥಿತರಿರುವರು.

error: Content is protected !!