ದಾವಣಗೆರೆ, ಡಿ.3- ರಾಜ್ಯ ಮಟ್ಟದ ಜ್ಯೂಡೋ ಸ್ಪರ್ಧೆಯಲ್ಲಿ ನಗರದ ಎ.ಆರ್.ಎಮ್ ಪ್ರಥಮ ದರ್ಜೆ ಕಾಲೇಜ್ ಜ್ಯೂಡೋ ಅಕಾಡೆಮಿ ವಿದ್ಯಾರ್ಥಿ ಯಶೀಕಾ ವಿ ನಾಯಕ್ ಈಚೆಗೆ ನಡೆದ 15 ವರ್ಷದೊಳ ಗಿನ ಸಬ್ ಜ್ಯೂನಿಯರ್ ಬಾಲಕ-ಬಾಲಕಿ ಯರ 35 ರಾಜ್ಯ ಮಟ್ಟದ ಜ್ಯೂಡೋ ಪಂದ್ಯಾವಳಿಯಲ್ಲಿ 31 ಜಿಲ್ಲೆ ಸ್ಪರ್ಧಾಳುಗಳ ವಿರುದ್ಧ ಸ್ಪರ್ಧಿಸಿ, ಚಿನ್ನದ ಪದಕ ಗೆದ್ದಿದ್ದಾರೆ.
ರಾಷ್ಟ್ರೀಯ ಕ್ರೀಡಾಪಟು ಮತ್ತು ಜ್ಯೂಡೋ ತರಬೇತುದಾರರಾದ ರಮೇಶ್ ಹೆಚ್.ವೈ. ಹಾಗೂ ಮಂಜುನಾಥ ಎಂ.ಎನ್. ಜ್ಯೂಡೋ ರಾಷ್ಟ್ರೀಯ ಕ್ರೀಡಾಪಟು ಮಾರ್ಗದರ್ಶನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಡಿಸೆಂಬರ್-24 ರಲ್ಲಿ ನಡೆಯುವ ಮಿನಿ ಒಲಿಂಪಿಕ್ 2023 ರಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಮಟ್ಟಕ್ಕೆ ಹೋಗಿ ಸ್ಪರ್ಧಿಸಲು ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ನಿರ್ದೇಶಕ ಡಾ. ಜಯಂತ್ ಧನ ಸಹಾಯ ಮಾಡಿದ್ದಾರೆ.