ದಾವಣಗೆರೆ, ಡಿ.3- ಕಾಂಗ್ರೆಸ್‌ನ ಯಾವ ಗ್ಯಾರಂಟಿಗಳೂ ಕೆಲಸ ಮಾಡಲ್ಲ ಎನ್ನುವುದಕ್ಕೆ ಇಂದು ಪ್ರಕಟವಾಗಿರುವ ಚುನಾವಣಾ ಫಲಿತಾಂಶದಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಸಾಧಿಸಿರುವ ಜಯ ಪ್ರತಿಬಿಂಬಿಸುತ್ತದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಪ್ರತಿಪಾದಿಸಿದ್ದಾರೆ.
ಕರ್ನಾಟಕದಲ್ಲಿ ಬೋಗಸ್ ಗ್ಯಾರಂಟಿ ನೀಡಿ ಗೆದ್ದಿದ್ದೇವೆ ಎಂದು ಬೀಗುತ್ತಿದ್ದ ಕಾಂಗ್ರೆಸ್ ಇಂದಿನ ಮೂರು ರಾಜ್ಯದ ಚುನಾವಣಾ ಫಲಿತಾಂಶದಿಂದ ಭ್ರಮನಿರಸಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ರಾಜ್ಯಗಳ ಜನತೆ ದೇಶವನ್ನು ದಿವಾಳಿಯತ್ತ ಕರೆದೊಯ್ಯದೇ, ಬಿಜೆಪಿಗೆ ಮತ ಹಾಕುವುದರ ಮೂಲಕ ದೇಶವನ್ನು ಸದೃಢಗೊಳಿಸಿದ್ದಾರೆ ಎಂದು ಶ್ರೀನಿವಾಸ್ ದಾಸಕರಿಯಪ್ಪ ತಿಳಿಸಿದ್ದಾರೆ. ರಾಜಕೀಯ ತಂತ್ರಕ್ಕೆ ಪ್ರತಿತಂತ್ರ ಮಾಡುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಅಲ್ಲಿ ಒಳ್ಳೆಯ ಯೋಜನೆಗಳನ್ನು ಬಿಜೆಪಿ ಘೋಷಿಸಿತ್ತು. ಅಲ್ಲಿ ಬಿಜೆಪಿ ಜನಪರ ಯೋಜನೆಯ ಗ್ಯಾರಂಟಿ ನೀಡಲಾಗಿದೆಯೇ ಹೊರತು ಜನರನ್ನು ಸೋಮಾರಿಗಳನ್ನಾಗಿ ಮಾಡುವ ಗ್ಯಾರಂಟಿ ಬಿಜೆಪಿ ಪ್ರಣಾಳಿಕೆಯಲ್ಲಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ.