ನೃತ್ಯ ಕಲಾವಿದೆ ಕು. ಬಿ.ಸಹನಾ ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮವು ಕುವೆಂಪು ಕನ್ನಡ ಭವನದಲ್ಲಿ ಇಂದು ಜರುಗಲಿದೆ.
ಅಧ್ಯಕ್ಷತೆಯನ್ನು ಡಾ. ಎಸ್.ಎಸ್.ಎನ್.ಪಿ.ಎಸ್. ಶಾಲೆಯ ಮುಖ್ಯಸ್ಥ ಮಂಜುನಾಥ ರಂಗರಾಜು ವಹಿಸುವರು. ಮುಖ್ಯ ಅತಿಥಿಗಳಾಗಿ ವಿಜಯಕರ್ನಾಟಕ ದಿನಪತ್ರಿಕೆ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ಬೆಂಗಳೂರಿನ ಬಿಎನ್ಎಂ ತಾಂತ್ರಿಕ ಕಾಲೇಜಿನ ಪ್ರೊಫೆಸರ್ ಡಾ.ಅಮಿತ್ ಶೇಖರ್, ಡಾ. ಎಸ್.ಎಸ್.ಎನ್.ಪಿ.ಎಸ್. ಶಾಲೆ ಮಾಜಿ ಪ್ರಾಂಶುಪಾಲರಾದ ಡಾ.ಪ್ರೀತಿ ಸಿಂಗ್, ಸಾಗರದ ನಾಟ್ಯ ತರಂಗ ಟ್ರಸ್ಟ್‌ನ ವಿದ್ವಾನ್ ಜಿ.ಬಿ.ಜನಾರ್ದನ್ ಮತ್ತು ಶ್ರೀಮತಿ ವರದಾಂಬಿಕ ಜನಾರ್ದನ್ ಮತ್ತು ಬಿಐಇಟಿ ಪ್ರಾಂಶುಪಾಲ ಹೆಚ್.ಬಿ.ಅರವಿಂದ್ ಆಗಮಿಸುವರು.
ಈ ರಂಗಪ್ರವೇಶ ಕಾರ್ಯಕ್ರಮದಲ್ಲಿ ನರ್ತಿಸುವ ಎಲ್ಲ ನೃತ್ಯ ಬಂಧುಗಳ ಸಾಹಿತ್ಯ, ರಚನೆ ಮತ್ತು ಸಂಗೀತ ಸಂಯೋಜನೆಯನ್ನು ಗುರುಗಳಾದ ರಾಜಗೋಪಾಲ ಭಾಗವತ ಮತ್ತು ಪೂರ್ಣಿಮಾ ಭಾಗವತರು ಮಾಡಿರುತ್ತಾರೆ.
ಕಲಾವಿದೆ ಸಹನಾ ಪರಿಚಯ: ವರ್ತಕ ಬಸವರಾಜ ಬನ್ನೆಟ್ಟಿ ಮತ್ತು ರೇಣುಕ ದಂಪತಿಯ ಪುತ್ರಿ ಸಹನಾ, ಶ್ರೀ ಶಾರದಾ ಸಂಗೀತ ಮತ್ತು ನೃತ್ಯ ಕಲಾಶಾಲೆಯಲ್ಲಿ ತಮ್ಮ 10ನೇ ವಯಸ್ಸಿನಿಂದಲೇ ಗುರುಗಳಾದ ವಿದುಷಿ ಶ್ರೀಮತಿ ಪೂರ್ಣಿಮಾ ಭಾಗವತರ ಶಿಷ್ಯೆಯಾಗಿ ನೃತ್ಯ ಅಭ್ಯಾಸ ಮಾಡಿದ್ದಾರೆ. ಅಲ್ಲದೇ ವಿದ್ವಾನ್ ರಾಜ ಗೋಪಾಲ ಭಾಗವತರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ.