ದಾವಣಗೆರೆ, ಡಿ.1- ನಗರದ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ಹಳೆ ಸಾಗರ ಬೆಣ್ಣೆದೋಸೆ ಹೋಟೆಲ್ ಬಳಿ ಮೊನ್ನೆ ಸುಮಾರು 55 ವರ್ಷ ವಯಸ್ಸಿನ ಪುರುಷನ ಮೃತ ದೇಹ ಸಿಕ್ಕಿದೆ.
ಮೃತನ ಮುಖದ ಮೇಲೆ ಕಪ್ಪು-ಬಿಳಿಪು ದಾಡಿ ಬೆಳೆದಿದ್ದು, ಮುಂದೆಲೆ ಬೊಕ್ಕತಲೆಯಾಗಿರುತ್ತದೆ. ತಲೆಯ ಹಿಂಭಾಗ ಗಾಯವಾಗಿರುತ್ತದೆ. ತುಂಬು ತೋಳಿನ ಮಾಸಲು ಕ್ರೀಂ ಕಲರ್ ಶರ್ಟ್, ಮಾಸಲು ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಸಂಬಂಧಪಟ್ಟವರು ಬಡಾವಣೆ ಪೊಲೀಸ್ ಠಾಣೆ (ದೂರವಾಣಿ : 08192-272012, 259213)ಯನ್ನು ಸಂಪರ್ಕಿಸಬಹುದು.