ನಗರದಲ್ಲಿ ಇಂದು ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ 60ರ ವರ್ಷಾಚರಣೆ

ದಾವಣಗೆರೆ, ನ.30- ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ, ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ ಹಾಗೂ ಶ್ರೀ ಜಗದ್ಗುರು ಜಯದೇವ ಮುರುಘ ರಾಜೇಂದ್ರ ಪ್ರೌಢಶಾಲೆಗಳ 60ರ ಸಂಭ್ರಮ ಕಾರ್ಯಕ್ರಮವನ್ನು ನಾಳೆ ದಿನಾಂಕ 1 ರಿಂದ ಮೂರು ದಿನಗಳ ಕಾಲ ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಯ ಆವರಣದ ಶ್ರೀಮತಿ ಸುರೇಖ ವೀರಣ್ಣ ಚಿಗಟೇರಿ ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮನೋಹರ್ ಎಸ್. ಚಿಗಟೇರಿ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನಾಂಕ 1ರಂದು ಬೆಳಿಗ್ಗೆ 9 ಗಂಟೆಗೆ ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆಯಿಂದ ಜಾಥಾ ಆರಂಭವಾಗಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಚಾಲನೆ ನೀಡುವರು. ಜಯವಿಭವ ಚಿಗಟೇರಿ ಅಧ್ಯಕ್ಷತೆ ವಹಿಸುವರು. ಸ್ತಬ್ಧ ಚಿತ್ರಕ್ಕೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ. ಕೊಟ್ರೇಶ್ ಚಾಲನೆ ನೀಡುವರು.

ಡಿ. 1ರಂದು ಸಂಜೆ 5 ಗಂಟೆಗೆ 60ರ ಸಂಭ್ರಮ ಕಾರ್ಯಕ್ರಮವನ್ನು ದಾವಣಗೆರೆ ವಿವಿ ಕುಲಪತಿ ಬಿ. ಡಿ. ಕುಂಬಾರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ, ಊಟಿಯ ಗುಡ್ ಶೆಫರ್ಡ್ ಸ್ಕೂಲ್ ಅಧ್ಯಕ್ಷ ಜೇಕಬ್ ಥಾಮಸ್, ಪಾಲಿಕೆ ಸದಸ್ಯ ಎ. ನಾಗರಾಜ್, ವರ್ತಕ ಅರುಣಾಚಲ ರೇವಣಕರ್ ಭಾಗವಹಿಸುವರು. ವೀರಣ್ಣ ವಿ. ಚಿಗಟೇರಿ ಅಧ್ಯಕ್ಷತೆ ವಹಿಸುವರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿವೆ ಎಂದು ತಿಳಿಸಿದರು.

ಡಿ. 2ರಂದು ಬೆಳಿಗ್ಗೆ 10ಗಂಟೆಗೆ ಸಂಸ್ಥಾಪಕರ ದಿನ ಹಾಗೂ `ಧರ್ಮಪ್ರಕಾಶದೊಂದು ಕಿರಣ’  ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.  ಸುವರ್ಣ ನಾಗೇಶ್ ಕವಿ  ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೆಚ್‌.ಬಿ. ಮಂಜುನಾಥ್‌ ಉಪಸ್ಥಿತರಿರಲಿದ್ದಾರೆ.

ಸಂಜೆ 5 ಗಂಟೆಗೆ `ಭವಿಷ್ಯತ್ತಿನಲ್ಲಿ ವಿದ್ಯಾಸಂಸ್ಥೆ’ ಕುರಿತ ಚರ್ಚೆಯಲ್ಲಿ ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ. ಸಿದ್ದೇಶ್ವರ್, ವೈದ್ಯೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಜೇಕಬ್ ಥಾಮಸ್, ಪಾಲಿಕೆ ಮಹಾಪೌರ ವಿನಾಯಕ ಪೈಲ್ವಾನ್ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.

ಡಿ. 3ರಂದು ಬೆಳಿಗ್ಗೆ 10.30ಕ್ಕೆ ನಡೆಯುವ `ಇಂದಿನ ಶಿಕ್ಷಣ ವ್ಯವಸ್ಥೆ-ಮೌಲ್ಯ ಪ್ರತಿಪಾದನೆ’ ಕುರಿತು ಡಾ. ಹೆಚ್.ವಿ. ವಾಮದೇವಪ್ಪ ವಿಷಯ ಮಂಡನೆ ಮಾಡುವರು. ಬಸವರಾಜಪ್ಪ ಬೆಳಗಾವಿ ಅಧ್ಯಕ್ಷತೆ ವಹಿಸುವರು. ಮಹಿಮಾ ಪಟೇಲ್, ಡಾ. ಹೆಚ್.ಬಿ. ಶಿವಕುಮಾರ್, ಬಿ.ಎನ್. ಮಲ್ಲೇಶ್, ಟಿ.ಎಂ. ಉಮಾಪತಯ್ಯ, ಕೆ.ವಿ. ಸುಜಾತ ಭಾಗವಹಿಸುವರು. ಸಂಜೆ 5ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿದ್ಯಾಸಂಸ್ಥೆ ಅಧ್ಯಕ್ಷ ಮುರುಗೇಂದ್ರ ಚಿಗಟೇರಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಹೆಚ್.ಎಸ್. ಶಿವಶಂಕರ್, ಅಜಯ್‌ಕುಮಾರ್, ಮೀನಾಕ್ಷಿ ಹಾಗೂ ಶ್ರೀನಿವಾಸ ದಾಸಕರಿಯಪ್ಪ ಪಾಲ್ಗೊಳ್ಳುವರು. ಬಳಿಕ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ವಿದ್ಯಾಸಂಸ್ಥೆಯ ಅಧ್ಯಕ್ಷ ಮುರುಘೇಂದ್ರ  ವಿ. ಚಿಗಟೇರಿ, ಸಹಕಾರ್ಯದರ್ಶಿ ಶ್ರೀಮತಿ ಸೌಮ್ಯ ಬಸವರಾಜ್, ಶೈಕ್ಷಣಿಕ ಸಲಹೆಗಾರ ಎಂ.ಟಿ. ಮಳಗಿ, ಮುಖ್ಯೋಪಾಧ್ಯಾಯರಾದ ಹೆಚ್. ನಿಂಗಪ್ಪ  ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!