ದಾವಣಗೆರೆ, ನ.30- ನಗರದ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈ-ಟೆಕ್ ಎಜುಕೇಷನ್, ವಾಣಿಜ್ಯ ವಿಭಾಗದಿಂದ ಕಾಲೇಜಿನಲ್ಲಿ ಬರುವ ಡಿಸೆಂಬರ್ ದಿನಾಂಕ 4ರ ಸೋಮವಾರದಂದು ಪಿಯುಸಿ ವಿದ್ಯಾರ್ಥಿ ಗಳಿಗಾಗಿ ವಿನೂತನ ವಾಗಿ ವಾಣಿಜ್ಯ ಪ್ರದರ್ಶನವನ್ನು ಆಯೋಜಿಸಲಾಗಿದೆ. ವಾಣಿಜ್ಯೋತ್ಸವ – 2023 ರ ಅಂಗವಾಗಿ ಮಾಡೆಲ್ ಪ್ರಸ್ತುತಿ, ಪೋಸ್ಟರ್ ಪ್ರಸ್ತುತಿ, ಮಾರ್ಕೆಟಿಂಗ್ ಸ್ಟೋರೀಸ್, ಕರೆನ್ಸಿ ಅಂಡ್ ಸ್ಟ್ಯಾಂಪ್ ಎಕ್ಸಿಬಿಷನ್, ಬ್ಯುಸಿನೆಸ್ ಐಡಿಯಾತನ್, ಬ್ಯುಸಿನೆಸ್ ಕ್ವಿಜ್ ಮತ್ತು ಸಂಸ್ಕೃತಿ ಕಲಾತ್ಮಕ ನೃತ್ಯ ಸ್ಪರ್ಧೆಗಳಿವೆ ಎಂದು ನಿರ್ದೇಶಕ ಡಾ.ಸ್ವಾಮಿ ತ್ರಿಭುವಾನಂದ ತಿಳಿಸಿದ್ದಾರೆ. ವಿವರಕ್ಕೆ ಸಂಪರ್ಕಿಸುವ ಮೊಬೈಲ್ ಸಂಖ್ಯೆ : 77956 88146 , 95911 45793.
January 13, 2025