ಹರಪನಹಳ್ಳಿ, ನ.30- ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಈಚೆಗೆ ರಾಮನಗರದಲ್ಲಿ ನಡೆದ ಜೂಡೊ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಗೋಲ್ಡ್ ಹಾಗೂ ಸಿಲವರ್ ಮೆಡಲ್ ಗಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸ.ಪ.ಪೂ ಕಾಲೇಜಿನ ಪ್ರಾಚಾರ್ಯ ಸಿ.ಬಿ.ವೆಂಕಟೇಶ ಅವರು, ಪ್ರಥಮ ಪಿ.ಯು ಶಿಕ್ಷಣ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿರುವ ಚೆನ್ನಹಳ್ಳಿ ತಾಂಡಾದ ಪ್ರಗತಿ ಎಂಬ ವಿದ್ಯಾರ್ಥಿನಿ 52 ಕಿಲೋ ವಿಭಾಗದ ಜೂಡೊ ಸ್ಪರ್ಧೆಯಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದಾಳೆ.
ಪ್ರಥಮ ವರ್ಷದ ಶಿಕ್ಷಣ ವಿಭಾಗದ ಇನ್ನೊಬ್ಬ ವಿದ್ಯಾರ್ಥಿನಿ ತಾಲ್ಲೂಕಿನ ಹುಲ್ಲಿಕಟ್ಟಿ ಗ್ರಾಮದ ಎಂ.ರಂಜಿತ 63 ಕಿಲೋ ವಿಭಾಗದ ಜೋಡೋ ಸ್ಪರ್ಧೆಯಲ್ಲಿ ಸಿಲವರ್ ಮೆಡಲ್ ಗಳಿಸಿದ್ದಾಳೆ.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಎಲಿಗಾರ, ಸದಸ್ಯರಾದ ಉಮಾ ಮಹೇಶ್, ವೆಂಕಟೇಶ್ ಹಾಜರಿದ್ದು ವಿದ್ಯಾರ್ಥಿನಿಯರಿಗೆ ಅಭಿನಂದಿಸಿದರು.