ಸಂಗಮ ಟಾಕೀಸ್ ಹಿಂದುಗಡೆ ಶ್ರೀ ರಂಗನಾಥ ನಗರ ರಸ್ತೆಯಲ್ಲಿರುವ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಕಾರ್ತಿಕೋತ್ಸವ ಇಂದು ನಡೆಯಲಿದೆ. ಸಂಜೆ 5.30 ಕ್ಕೆ ಶ್ರೀ ಮಹಾಲಕ್ಷ್ಮಿ ದೇವಿಯ ಉತ್ಸವ ಮೂರ್ತಿ ಹಾಗೂ ಬಣಗಾರ ಸಮಾಜದ ಆದಿಗುರು ಶ್ರೀ ಶಂಕರ ದಾಸಿಮಯ್ಯನವರ ಭಾವಚಿತ್ರದ ಪಾಲಕಿ ಉತ್ಸವ ಜರುಗುವುದು. ಸಂಜೆ 7 ಕ್ಕೆ ಮಹಾಲಕ್ಷ್ಮಿ ದೇವಿಯ ಕಾರ್ತಿಕ ದೀಪೋತ್ಸವ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
January 12, 2025