ವಿಜ್ಞಾನ, ತಂತ್ರಜ್ಞಾನ ಅಕಾಡೆಮಿಯಿಂದ ರಾಷ್ಟ್ರೀಯ ಕಾರ್ಯಾಗಾರ

ದಾವಣಗೆರೆ, ನ. 30 – ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ಡಿಸೆಂಬರ್ 6 ರಿಂದ 8ರ ವರೆಗೆ ಬೆಂಗಳೂರಿನ ವಿದ್ಯಾರಣ್ಯ ಪುರದಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಜಿ.ಕೆ.ವಿ.ಕೆ ಆವರಣದಲ್ಲಿ ಬೇಸಿಕ್ಸ್ ಅಂಡ್ ರಿಯಲ್-ವರ್ಡ್ ಅಪ್ಲಿಕೇಶನ್ಸ್ ಆಫ್ ಯುಎವಿ ಅಂಡ್ ಡ್ರೋನ್ಸ್  ವಿಷಯ ಕುರಿತು ರಾಷ್ಟ್ರೀಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಾಗಾರದಲ್ಲಿ 35 ವರ್ಷ ಮೀರದ ಪದವಿ, ಸ್ನಾತಕೋತ್ತರ, ಡಿಪ್ಲೋಮಾ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.  ಆಸಕ್ತ ವಿದ್ಯಾರ್ಥಿಗಳು ಡಿಸೆಂಬರ್ 2 ರೊಳಗಾಗಿ ವೆಬ್‍ಸೈಟ್ https://forms.gle/fBWXpnoczCTd3ZDFA  ನಲ್ಲಿ ಭರ್ತಿ ಮಾಡಿ ನೋಂದಾಯಿಸಿಕೊಳ್ಳಬೇಕು.

ವಿವರಗಳಿಗೆ ವೈಜ್ಞಾನಿಕ ಅಧಿಕಾರಿ (ಮೊ: 9743084194) ಅಥವಾ ಅಕಾಡೆಮಿಯ ವೆಬ್ ಸೈಟ್ www.kstacademy.in ಸಂಪರ್ಕಿಸಲು ಅಕಾಡೆಮಿ ಕಾರ್ಯನಿರ್ವಾಹಕ ಅಧಿಕಾರಿ ಎ.ಎಂ ರಮೇಶ್ ತಿಳಿಸಿದ್ದಾರೆ.

error: Content is protected !!