ನಾಳೆ ಬಾಯಿರೋಗ ವಿಚಾರ ಸಂಕಿರಣ

ದಾವಣಗೆರೆ, ನ.28- ಬಾಪೂಜಿ ದಂತ ವೈದ್ಯಕೀಯ ಕಾಲೇಜು ಮತ್ತು ಕಾಲೇಜ್ ಆಫ್ ಡೆಂಟಲ್ ಸೈನ್ಸೆಸ್ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್‌ 1 ರಿಂದ 3 ರ ವರೆಗೆ 34 ನೇ ರಾಷ್ಟ್ರ ಮಟ್ಟದ ಬಾಯಿರೋಗ ವೈದ್ಯಕೀಯ ಹಾಗೂ ಕ್ಷ ಕಿರಣ ವಿಭಾಗದ ವಿಚಾರ ಸಂಕಿರಣ ನಡೆಯಲಿದೆ ಎಂದು ಡೆಂಟಲ್‌ ಕಾಲೇಜಿನ ಪ್ರಾಂಶುಪಾಲ ಡಾ. ಐ.ಎಂ. ಅಲಿ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಡಿ. 2 ರ ಶನಿವಾರ ಬೆಳಗ್ಗೆ 11 ಕ್ಕೆ ಬಾಪೂಜಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ.‌ ಸಿದ್ದಪ್ಪ ಉದ್ಘಾಟಿಸುವರು. ಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪ, ಜಂಟಿ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್‌. ಮಲ್ಲಿಕಾರ್ಜುನ್ ಇತರರು ಭಾಗವಹಿಸುವರು. 

ಮೂರು ದಿನಗಳ ವಿಚಾರ ಸಂಕಿರಣದಲ್ಲಿ 800ಕ್ಕೂ ಹೆಚ್ಚು ದಂತ ವೈದ್ಯರು ಭಾಗವಹಿಸಿ, 550ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ ಮಂಡಿಸುವರು ಎಂದು ತಿಳಿಸಿದರು.

ಡಾ. ಎಲ್. ಅಶೋಕ್, ಡಾ. ಮಮತಾ, ಡಾ. ಶಂಭುಲಿಂಗಪ್ಪ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!