ನಗದು ಹಣ ಕಿತ್ತುಕೊಂಡು ಪರಾರಿ

ದಾವಣಗೆರೆ, ನ. 29 –  ಭಾನುವಾರ ರಾತ್ರಿ 10.30ರ ವೇಳೆಯಲ್ಲಿ ನಗರದ ಗ್ಲಾಸ್ ಹೌಸ್ ಪಕ್ಕದ ಲೇ ಔಟ್‌ನಲ್ಲಿ ಬೈಕ್ ನಿಲ್ಲಿಸಿಕೊಂಡು ಮೊಬೈಲ್ ನೋಡುತ್ತಿದ್ದಾಗ ಇಬ್ಬರು ವ್ಯಕ್ತಿಗಳು 2 ಮೊಬೈಲ್ ಹಾಗೂ ಜೇಬಿನಲ್ಲಿದ್ದ 7 ಸಾವಿರ ರೂ.ಗಳನ್ನು ಕಿತ್ತುಕೊಂಡು  ಹೋಗಿದ್ದಾರೆ ಎಂದು ಗೌಸ್ ಪೀರ್ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: Content is protected !!