ದಾವಣಗೆರೆ, ನ.28- ಚನ್ನಗಿರಿ ತಾಲ್ಲೂಕು ಕಾಕನೂರು ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ವಿಷಪೂರಿತ ಆಹಾರ ಪೂರೈಕೆ ಹಾಗೂ ಕರ್ತವ್ಯ ಲೋಪ ಎಸಗಿದ ಪ್ರಾಂಶುಪಾಲ ಮಂಜುನಾಥ್ ಪುರದ್ ಹಾಗೂ ನಿಲಯ ಪಾಲಕಿ ನಸೀಮಾ ಬಾನು ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಆದೇಶಿಸಿದ್ದಾರೆ.
ಈ ವಸತಿ ಶಾಲೆಯಲ್ಲಿ ಸೋಮ ವಾರ ಬೆಳಗ್ಗೆ ಉಪಹಾರ ಸೇವಿಸಿದ ನಂತರ ಕೆಲ ವಿದ್ಯಾರ್ಥಿಗಳ ಆರೋಗ್ಯ ದಲ್ಲಿ ಏರುಪೇರಾಗಿರು ವುದು ಕಂಡು ಬಂದಿತ್ತು. ತಕ್ಷಣ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅಸ್ವಸ್ಥರಾಗಲು ವಿಷಪೂರಿತ ಆಹಾರ ಸೇವನೆ ಕಾರಣವಾಗಿದ್ದು, ಸರಿಯಾದ ನಿರ್ವಹಣೆ ಮಾಡದಿರುವುದು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳದಿರುವುದು ಕಾರಣವಾಗಿದ್ದು, ಈ ಘಟನೆಗೆ ವಸತಿ ಶಾಲೆ ಪ್ರಾಂಶುಪಾಲರು ಮತ್ತು ನಿಲಯ ಪಾಲಕಿ ಅವರ ಕರ್ತವ್ಯ ನಿರ್ಲಕ್ಷ್ಯತೆ ಕಾರಣವಾಗಿದೆ ಎಂದು ಪರಿಗಣಿಸಿ ಅಮಾನತ್ತುಗೊಳಿಸಲಾಗಿದೆ.
ಹೆಚ್ಚುವರಿ ಪ್ರಭಾರ ವ್ಯವಸ್ಥೆ: ಮಾವಿನಹೊಳೆ ಇಂದಿರಾ ಗಾಂಧಿ ವಸತಿ ಶಾಲೆ ಪ್ರಾಂಶುಪಾಲರಾದ ಗುರುಮೂರ್ತ್ಯಪ್ಪ ಇವರಿಗೆ ಹೆಚ್ಚುವರಿ ಪ್ರಭಾರ ವಹಿಸಿಕೊಳ್ಳಲು ಆದೇಶಿಸಲಾಗಿದೆ. ಮತ್ತು ನಿಲಯ ಪಾಲಕರಾಗಿ ಕಾಕನೂರು ವಸತಿ ಶಾಲೆಯ ಅನಿತಾ ಆರ್ ಅವರಿಗೆ ಹೆಚ್ಚುವರಿ ಪ್ರಭಾರದಲ್ಲಿರಿಸಿ ಆದೇಶಿಸಲಾಗಿದೆ.
ಮೂವರ ಮೇಲೆ ಪ್ರಕರಣ ದಾಖಲು: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲ ಮಂಜುನಾಥ್, ವಾರ್ಡ್‌ನ ನಸೀಮಾ ಬಾನು ಹಾಗೂ ದಿನಸಿ ಸರಬ ರಾಜು ಮಾಡುವ ಕಂಟ್ರಾಕ್ಟರ್ ಹಾಗೂ ಇತರರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಎಸ್ಪಿ ಉಮಾ ಪ್ರಶಾಂತ್ ಹಾಗೂ ಸಿಜೆ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದು, ಪ್ರಕರಣದ ತನಿಖೆಗೆ ಸೂಚಿಸಿದ್ದಾರೆ.