ಹಿಂದೂಗಳ ದಮನಕ್ಕೆ ವಿದೇಶಿ ಹಣ

ಹಿಂದೂಗಳ ದಮನಕ್ಕೆ ವಿದೇಶಿ ಹಣ

ದಾವಣಗೆರೆ, ನ.28- ಭಾರತದಲ್ಲಿ ಹಿಂದೂಗಳನ್ನು ದಮನಿಸಲು ಹೊರ ದೇಶಗಳಿಂದ ಸಾಕಷ್ಟು ಹಣ ಬರುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಮೋ ಬ್ರಿಗೇಡ್ ವತಿಯಿಂದ ನಗರದ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ §ಇನ್ನೂ ಮಲಗಿದರೆ ಏಳುವಾಗ ಭಾರತ ಇರುವುದಿಲ್ಲ¬ ಉಪನ್ಯಾಸ ಮಾಲಿಕೆಯ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಾರ್ವರ್ಡ್ ಯೂನಿವರ್ಸಿಟಿಗೆ 8 ರಿಂದ 10 ಬಿಲಿಯನ್ ಜಾಗತಿಕ ಮಟ್ಟದಲ್ಲಿ ಧನ ಸಹಾಯ ಹರಿದು ಬರುತ್ತಿದೆ. ಈ ಹಣವನ್ನು ಹಿಂದೂಗಳನ್ನು ದಮನಿಸಲು ಜಾಣ್ಮೆಯಿಂದ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿ ದರು. ಅಮೇರಿಕಾದಲ್ಲಿರುವ ಭಾರತೀಯ ಮೂಲಗಳ ಮಕ್ಕಳಿಗೂ ಹಿಂದುತ್ವದ ಬಗ್ಗೆ ಋಣಾತ್ಮಕವಾಗಿ ತಿಳಿಸಿಕೊಡುವುದರಿಂದ ಅವರು ಧೈರ್ಯವಾಗಿ ನಾವು ಹಿಂದೂಗಳು ಎಂದು ಹೇಳಿಕೊಳ್ಳಲೂ ಮುಜುಗರ ಪಡುವಂತೆ ಮಾಡಲಾಗುತ್ತಿದೆ ಎಂದರು.

ಅಮೇರಿಕಾ ತನ್ನ ಶತ್ರುದೇಶಗಳ ಮೇಲೆ ನಡೆಸುವ ದಾಳಿಗೆ ಸಮರ್ಪಕ ಕಾರಣ ನೀಡುತ್ತದೆ. ಆದರೆ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ಬೇರೆ ದೊಡ್ಡ ರಾಷ್ಟ್ರಗಳಿಗೆ ಉತ್ತರ ನೀಡಬೇಕಾಗಿತ್ತು. ಆದರೆ ಈಗ ಭಾರತಕ್ಕೆ ಸಮರ್ಥ ಪ್ರಧಾನಿ ಸಿಕ್ಕಿರುವುದರಿಂದ ಉತ್ತರ ನೀಡುವ ಪ್ರಮೇಯ ಇಲ್ಲವಾಗಿದೆ ಎಂದು ಹೇಳಿದರು.

ಜಾತೀಯತೆಗೆ ಆರ್ಯರ ಆಕ್ರಮಣದ ಕಾರಣ ಎಂದು ಹೇಳಲಾಯಿತು. ಆದರೆ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬೇರೆ ಬೇರೆ ಪ್ರದೇಶದಲ್ಲಿ ಜಾತಿ ಬೇರೆ ಬೇರೆ ಸ್ವರೂಪದಲ್ಲಿತ್ತು. 

ಜಾತಿ ಬರುವುದಕ್ಕೂ ಮೊದಲು ಭಾರತದಲ್ಲಿ ವರ್ಣ ವ್ಯವಸ್ಥೆ ಇತ್ತು. ಉನ್ನತ ಸ್ಥಾನದಲ್ಲಿದ್ದ ಬ್ರಾಹ್ಮಣ ವಿಷಯ ತಜ್ಞನಾಗಿದ್ದ. ಆಚರಣೆಯಲ್ಲಿ ಗುರುವಾಗಿದ್ದ. ಆದರೆ ಸಂಪತ್ತನ್ನು ಕ್ರೋಢೀಕರಿಸುವಂತಿಲ್ಲ ಎಂಬ ಚೌಕಟ್ಟು ಆತನಿಗಿತ್ತು.

ಕ್ಷತ್ರಿಯ ರಾಜಕೀಯ ಶಕ್ತಿ ಹಾಗೂ ಸೈನಿಕ ಆದರೂ ಈತನಿಗೆ ಸಂಪತ್ತಿನ ನಿಯಂತ್ರಣವಿರಲಿಲ್ಲ. ವೈಶ್ಯ ವ್ಯಾಪಾರ-ವಹಿವಾಟು ನಿರ್ವಹಿಸುತ್ತಿದ್ದ. ಆದರೆ ಈತನಿಗೆ ರಾಜಕಾರಣಕ್ಕೆ ಬರುವಂತಿಲ್ಲ ಎಂಬ ಚೌಕಟ್ಟಿತ್ತು.

ಶೂದ್ರ ಕುಶಲಕರ್ಮಿಯೂ, ಸರ್ಜರಿಯಿಂದ ಕೃಷಿವರೆಗೆ ಎಲ್ಲಾ ಕಾರ್ಯಗಳನ್ನೂ ಮಾಡಬಹುದಿತ್ತು. ಇವನು ಸಂಪತ್ತು ಸಂಗ್ರಹಿಸಬಹುದಾಗಿತ್ತು. ಯಾವ ಕಟ್ಟುಪಾಡಿಗಳೂ ಇರುತ್ತಿರಲಿಲ್ಲ. ಈ ರೀತಿಯಲ್ಲಿದ್ದ ವರ್ಣ ವ್ಯವಸ್ಥೆಯನ್ನು ಒಪ್ಪಿಕೊಂಡೇ ಭಾರತೀಯರು ಜೀವನ ಸಾಗಿಸುತ್ತಿದ್ದರು. ಆದರೆ ಬ್ರಿಟೀಷರು ಇದನ್ನು ಜಾತಿ ವ್ಯವಸ್ಥೆ ಎಂದರು.

error: Content is protected !!