ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸ್ಮರಣಾರ್ಥ 5 ದಿನಗಳ ಕ್ರಿಕೆಟ್ ಪಂದ್ಯಾವಳಿ
ದಾವಣಗೆರೆ, ನ.27- ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪನವರ ಸವಿನೆನಪಿಗಾಗಿ 16ನೇ ವರ್ಷದ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಪಂದ್ಯಾವಳಿಗೆ ನಗರದ ಜಿಲ್ಲಾ ಕ್ರಿಡಾಂಗಣದಲ್ಲಿ ನಾಳೆ ದಿನಾಂಕ 27ರಂದು ಚಾಲನೆ ನೀಡ ಲಾಗುತ್ತದೆ ಎಂದು ದಿನೇಶ್ ಕೆ.ಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮಂಗಳವಾರ ಸಂಜೆ ಪಂದ್ಯಾವಳಿಗಳಿಗೆ ಚಾಲನೆ ನೀಡಲಿದ್ದಾರೆ. ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾ ಧಿಕಾರಿ ಡಾ.ಎಂ.ವಿ. ವೆಂಕಟೇಶ್, ಎಸ್ಪಿ ಉಮಾ ಪ್ರಶಾಂತ್, ಡಾ.ಪ್ರಭಾ ಮಲ್ಲಿಕಾರ್ಜುನ್, ಸಮರ್ಥ್ ಮಲ್ಲಿಕಾ ರ್ಜುನ್, ಉದ್ಯಮಿ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಶ್ರೀನಿವಾಸ್ ಶಿವ ಗಂಗಾ, ರಾಜು ರೆಡ್ಡಿ, ಉದಯ ಕುಮಾರ್ ಇತರರು ಇರಲಿದ್ದಾರೆ.
ಟೂರ್ನಿಯಲ್ಲಿ ಪ್ರಥಮ ಬಹುಮಾನ 5,05,555 ರೂ. ಹಾಗೂ ಶಾಮನೂರು ಡೈಮಂ ಡ್ ಕಪ್, ದ್ವಿತೀಯ ತಂಡಕ್ಕೆ 3,05,555 ನಗದು ಹಾಗೂ ಶಿವಗಂಗಾ ಕಪ್ ಹಾಗೂ ತೃತೀಯ ಬಹುಮಾನವಾಗಿ 1,5,5500 ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಎಲ್ಲಾ ಪಂದ್ಯಗಳು M9SPORTS ಯೂ ಟ್ಯೂಬ್ ನಲ್ಲಿ ನೇರ ಪ್ರಸಾರ ಮಾಡಲಾಗುವುದು.
ಟೂರ್ನಿಯಲ್ಲಿ ದಾವಣಗೆರೆಯ 12 ಹಾಗೂ ಬೆಂಗಳೂರಿನ 16 ತಂಡಗಳೂ ಸೇರಿ ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಅಯೋಧ್ಯಾ ನಗರಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗ ಳಿಂದ 38 ತಂಡಗಳು ಭಾಗವಹಿಸಲಿವೆ.
ಪತ್ರಿಕಾಗೋಷ್ಠಿಯಲ್ಲಿ ಜಯಪ್ರಕಾಶ್ ಗೌಡ, ಹಾಲಪ್ಪ, ಆಕಾಶ್, ಕಾರ್ತಿಕ್, ಪ್ರಕಾಶ್, ರಾಘವೇಂದ್ರ, ಯೋಗೀಶ್, ಜಿ.ಬಿ. ಪಾಟೀಲ್, ವಿಜಯ್, ನಿಖಿತ್ ಶೆಟ್ಟಿ ಉಪಸ್ಥಿತರಿದ್ದರು.