ದಾವಣಗೆರೆ, ನ.27- ವರದಿಗಾರರು ಸುದ್ದಿಯನ್ನು ಹೋರುವ ಹಮಾಲರಲ್ಲ ಆದರೆ ಪ್ರಸ್ತುತ ವ್ಯವಸ್ಥೆ ನಮ್ಮನ್ನು ಆ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ಹೇಳಿದರು.
ಪತ್ರಕರ್ತರಿಗೆ ನೌಕರಿ ಗ್ಯಾರಂಟಿ ಇಲ್ಲದಿರುವುದು, ಕೆಲಸದ ಒತ್ತಡ ಹೆಚ್ಚಾಗಿ ಚಿಕ್ಕವಯಸ್ಸಿನಲ್ಲೇ ಹಾರ್ಟ್ ಅಟ್ಯಾಕ್ನಂತಹ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ದುಃಖದ ವಿಷಯ. ಇದರ ಜೊತೆ ವ್ಯವಸ್ಥೆಯೂ ಸಹ ವರದಿಗಾರನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡದೇ, ಕೇವಲ ಸುದ್ದಿ ಹೋರುವ ಹಮಾಲಿಯಂತೆ ನೋಡುತ್ತಿರುವುದು ವಿಷಾದನೀಯ ಎಂದರು.
ಪ್ರತಿಯೊಬ್ಬ ವರದಿಗಾರನಿಗೆ ಅವನದ್ದೇ ಆದ ಒಂದು ದೃಷ್ಟಿಕೋನ ಇರುತ್ತದೆ. ಆದರೆ ಆ ದೃಷ್ಟಿಕೋನವನ್ನು ವ್ಯವಸ್ಥೆ ಕೊಲೆ ಮಾಡುತ್ತಿದೆ. ನಾವು ಎಲ್ಲಿ ಕೆಲಸ ಮಾಡುತ್ತಿದ್ದೇವೆ ಅವರೇ ನಮ್ಮ ಆತ್ಮ ಗೌರವವನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದರು. ಮಹಾನಗರ ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್, ಪಾಲಿಕೆ ಸದಸ್ಯ ಕೆ.ಚಮನ್ ಸಾಬ್ ಸೇರಿದಂತೆ ಇತರರು ಈ ಸಂದರ್ಭದಲ್ಲಿದ್ದರು.