ಹರಿಹರದಲ್ಲಿ ಇಂದು ಜಾನಪದ ನೃತ್ಯ ಸ್ಪರ್ಧೆ

ಗಿರಿಯಮ್ಮ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ `ಸಾಮಾಜಿಕ ಸಾಮರಸ್ಯದೆಡೆಗೆ ಯುವಜನತೆ ಹಾಗೂ ಸ್ವಚ್ಛ ಭಾರತ ಅಭಿಯಾನ’ದ ಭಾಗವಾಗಿ ಕಾಲೇಜು ಮಟ್ಟದ ರಾಷ್ಟ್ರೀಯ ಸೇವಾ ಯೋಜನೆ ಯ ವಿಶೇಷ ವಾರ್ಷಿಕ ಶಿಬಿರವು ವಾಸನ ಗ್ರಾಮದ ಶ್ರೀ ಮಾರ್ಕಂಡೇಶ್ವರ ಸಮುದಾಯ ಭವನದಲ್ಲಿ ನಿನ್ನೆ ಆರಂಭಗೊಂಡಿದ್ದು, ಡಿಸೆಂಬರ್ 2 ರವರಿಗೆ  ನಡೆಯಲಿದೆ ಎಂದು ಗಿರಿಯಮ್ಮ ಕಾಲೇಜು ಪ್ರಾಂಶುಪಾಲ ಡಾ.ಜಿ.ಬಿ. ಗಂಗಾಧರಪ್ಪ ತಿಳಿಸಿದ್ದಾರೆ.

ಇಂದು ಬೆಳಗ್ಗೆ 6-30 ಕ್ಕೆ ಶ್ರೀಮತಿ ಗಾಯತ್ರ ಜಗದೀಶ್ ಇವರಿಂದ ಧ್ವಜಾರೋಹಣ. ಮಧ್ಯಾಹ್ನ 3 ಗಂಟೆಗೆ ಸಮೂಹ ಜಾನಪದ ನೃತ್ಯ ಸ್ಪರ್ಧೆ ನಡೆಯಲಿದೆ.  ನಾಳೆ ಬುಧವಾರ ಬೆಳಗ್ಗೆ 6-30ಕ್ಕೆ ಪಿ. ಓಂಕಾರಪ್ಪನವರಿಂದ ಧ್ವಜಾರೋಹಣ. 9 ಗಂಟೆಗೆಯಿಂದ ಬರಡು ದನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ. ಮಧ್ಯಾಹ್ನ 3 ಗಂಟೆಗೆ ಉಪನ್ಯಾಸಕ ಪಿ. ಅಣ್ಣೇಶ್‌ರಿಂದ ಉಪನ್ಯಾಸ. ಸಂಜೆ ವಾಸನ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

error: Content is protected !!