ದಾವಣಗೆರೆ, ನ.27- ತಾಲ್ಲೂಕಿನ ಬಿ.ಕಲಪನಹಳ್ಳಿ ಕ್ರಾಸ್ ಬಳಿ ನಿರ್ಮಾಣಗೊಳ್ಳುತ್ತಿರುವ ಎಸ್.ಎ. ಪ್ಯಾಲೇಸ್ ಪಕ್ಕದ ನಿವೇಶನದಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಸುಮಾರು 65 ವರ್ಷ ವಯಸ್ಸಿನ ಮೃತನು ಕಣ್ಣು, ಬಾಯಿ ಮುಚ್ಚಿರುತ್ತಾರೆ. ಕೋಲು ಮುಖ, ತೆಳುವಾದ ಮೈಕಟ್ಟು ಹೊಂದಿದ್ದು, ಎಣ್ಣೆಗೆಂಪು ಬಣ್ಣದವನಾಗಿರುತ್ತಾನೆ. ಕಪ್ಪು ಬಣ್ಣದ ತುಂಬು ತೋಳಿನ ಶರ್ಟ್, ನೀಲಿ ಬಣ್ಣದ ಚಡ್ಡಿ ಧರಿಸಿರುತ್ತಾನೆ. ಕೆಂಪು ಓವರ್ ಕೋಟ್ ಆತನ ಪಕ್ಕದಲ್ಲಿದೆ. ಸಂಬಂಧ ಪಟ್ಟವರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ (08192-262555, 9480803256, 08192-253100) ಗೆ ಸಂಪರ್ಕಿಸಬಹುದಾಗಿದೆ.
February 24, 2025