ಹೊನ್ನಾಳಿ : ವಿದ್ಯುತ್ ಅವಘಡದಿಂದ ರೈತ ಸಾವು

ಹೊನ್ನಾಳಿ : ವಿದ್ಯುತ್ ಅವಘಡದಿಂದ ರೈತ ಸಾವು

ಹೊನ್ನಾಳಿ, ನ.27- ಇಂದು ಬೆಳಿಗ್ಗೆ 11.30ಕ್ಕೆ ತೋಟಕ್ಕೆ ನೀರು ಹಾಯಿಸಲು ಹೋದಾಗ ಬಲಮುರಿ ಗ್ರಾಮದ ವೀರಭದ್ರಸ್ವಾಮಿ (30) ಅವರಿಗೆ ವಿದ್ಯುತ್ ಅವಘಡ ಸಂಭವಿಸಿದೆ. ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ. ಮೃತ ವೀರಭದ್ರಸ್ವಾಮಿ ಅವರು ಅವಿವಾಹಿತರಾಗಿದ್ದರು. ಹೊನ್ನಾಳಿ ಪೊಲೀಸ್ ಠಾಣೆಯ ಎಎಸ್‍ಐ ಏಕಾಂತಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ದೂರು ದಾಖಲು ಮಾಡಿಕೊಂಡಿದ್ದಾರೆ.

ಶಾಸಕ ಡಿ.ಜಿ.ಶಾಂತನಗೌಡ ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.

error: Content is protected !!