ಭಾವಸಾರ ವಿಷನ್ ಇಂಡಿಯಾ ಹಾಗೂ ಸಿಟಿ ಸೆಂಟ್ರಲ್ ಹಾಸ್ಪಿಟಲ್, ಘಟಕ-2 ಸ್ಪೈರ್ ಕ್ಲಿನಿಕ್ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಕೀಲು, ಮೂಳೆ, ಮಂಡಿಚಿಪ್ಪು ಮರುಜೋಡಣೆ, ಮೂಳೆ ಸಾಂದ್ರತೆ ತಪಾಸಣಾ ಶಿಬಿರವನ್ನು ಇಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 2 ರವರೆಗೆ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಕೀಲು ಮೂಳೆ ತಜ್ಞ ಡಾ. ಹರೀಶ್ ಪುರಾಣಿಕ್ ಅವರು ಈ ಶಿಬಿರವನ್ನು ನಡೆಸಿಕೊಡುವರು. ಮಹಾರಾಜಪೇಟೆಯ ಶ್ರೀ ವಿಠ್ಠಲ ರುಕುಮಾಯಿ ಮಂದಿರದಲ್ಲಿ ತಪಾಸಣಾ ಶಿಬಿರ ನಡೆಯಲಿದ್ದು, ವಿವರಗಳಿಗೆ ಸರಳಾ ಆಮ್ಟೆ (94483 64830), ಅಶೋಕ್ ನವಲೆ (98443 59739) ಅವರನ್ನು ಸಂಪರ್ಕಿಸಬಹುದು.
January 23, 2025