ದಾವಣಗೆರೆ, ನ.24- ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಹಾಗೂ ಮಾಜಿ ಸಚಿವ ಜಯಪ್ರಕಾಶ್ ಹೆಗಡೆಯವರನ್ನು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಇಂದು ಭೇಟಿ ಮಾಡಿದ್ದರು.
ನ್ಯಾಯಮೂರ್ತಿ ಕಾಂತರಾಜ್ ಆಯೋಗದ ಜಾತಿ ಗಣತಿಯ ಮೂಲ ದಾಖಲಾತಿಗಳು ಕಳೆದಿವೆ ಎಂದು ಮಾಧ್ಯಮದಲ್ಲಿ ಬರುತ್ತಿ ರುವುದರ ಬಗ್ಗೆ ಬಸವರಾಜ್ ಅಧ್ಯಕ್ಷರೊಂದಿಗೆ ಚರ್ಚಿಸಿ ದರು. ಇದಕ್ಕೆ ಉತ್ತರಿಸಿದ ಜಯಪ್ರಕಾಶ್ ಹೆಗಡೆಯವರು ಜಾತಿ ಗಣತಿಯ ಯಾವುದೇ ಮೂಲ ದಾಖಲಾತಿಗಳು ಕಳೆದು ಹೋಗಿಲ್ಲ. ನನ್ನಲ್ಲಿ ಎಲ್ಲಾ ದಾಖಲಾತಿಗಳು ಇವೆ. ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವರದಿಯನ್ನು ಸಲ್ಲಿಸಲಿದ್ದೇನೆ ಎಂದು ತಿಳಿಸಿದರು.