ಆಂಜನೇಯ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಇಂದು ಸಂಜೆ 5.30 ರಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು. ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಕುಸುಮ ಲೋಕೇಶ್ ಅಧ್ಯಕ್ಷತೆ ವಹಿಸುವರು. ಸಮಿತಿಯ ಗೌರವಾಧ್ಯಕ್ಷ ಕೆ. ಎಸ್. ಈಶ್ವರಪ್ಪ ಪ್ರಸ್ತಾವಿಕ ನುಡಿಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಸವರಾಜ್ ಹನುಮಲಿ ಮತ್ತು ಶ್ರೀಮತಿ ವೀಣಾ ನಂಜಣ್ಣ ಆಗಮಿಸಲಿದ್ದಾರೆ. ಸಾಹಿತಿ ನಾಗಪ್ಪ ತಳಕಲ್ ಮತ್ತು ನಿವೃತ್ತ ಮುಖ್ಯ ಇಂಜಿನಿಯರ್ ಎಸ್.ವಿ. ಪುಕಾಳೆ ಅವರನ್ನು ಸನ್ಮಾನಿಸಲಾಗುತ್ತದೆ. ಕೆ.ಎಚ್. ರೇವಣ್ಣ ನಿವೃತ್ತ ಡಿ ವೈ ಎಸ್ ಪಿ, ಡಿ.ಬಿ. ರುದ್ರೇಗೌಡ, ಮಾಜಿ ಸದಸ್ಯರು ಮಹಾನಗರ ಪಾಲಿಕೆ, ಎಲ್.ಎಸ್. ಅಜಗಣ್ಣ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಎಂದು ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ವಸಂತ ಅವರು ತಿಳಿಸಿದ್ದಾರೆ.
January 11, 2025