ಭಾರತೀಯ ಅಂಚೆ ಇಲಾಖೆಯ ಅಂಚೆ ಮನರಂಜನಾ ಕೂಟದಿಂದ ಇಂದು ಅಪರಾಹ್ನ 3.30ಕ್ಕೆ ಪ್ರಧಾನ ಅಂಚೆ ಕಛೇರಿಯ ಸಭಾಂಗಣದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕರಾದ ಶ್ರೀಮತಿ ಸರಸ್ವತಿ ಡಿ. ಜೋಶಿ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಅಂಚೆ ಅಧೀಕ್ಷಕ ಚಂದ್ರಶೇಖರ್, ಉಪ ಅಂಚೆ ಅಧೀಕ್ಷಕ ಜೆ.ಎಸ್. ಗುರುಪ್ರಸಾದ್, ಉಪ ಅಂಚೆ ಅಧೀಕ್ಷಕ ನರೇಂದ್ರನಾಯಕ್ ಕೆ.ಎಂ, ಅಂಚೆ ನಿರೀಕ್ಷಕ ಅಶ್ವತ್ಥ್ ವಿ, ಚನ್ನಗಿರಿ ಉಪ ಅಂಚೆ ನಿರೀಕ್ಷಕ ಸ್ವಾಮಿ ಜೆ.ಡಿ. ವಿಶೇಷ ಆಹ್ವಾನಿತರಾಗಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಆಗಮಿಸಲಿದ್ದಾರೆ.
January 12, 2025