ರಿಯಲ್ ಎಸ್ಟೇಟ್ ಸ್ನೇಹಿತರ ಬಳಗದಿಂದ ಇಂದು ಬೆಳಿಗೆ 10 ಗಂಟೆಗೆ ಎಸ್.ಎಸ್. ಬಡಾವಣೆ ಎ ಬ್ಲಾಕ್, ನಿಜಲಿಂಗಪ್ಪ ಬಡಾವಣೆಯ ಶಾರದಾಂಬ ವೃತ್ತದಲ್ಲಿ ಧ್ವಜಾರೋಹಣ ಮಾಡುವುದರ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುವುದು.
ಸಂಜೆ 6 ಗಂಟೆಗೆ ಭಾರತಿ ಆರ್ಕೆಸ್ಟ್ರಾ ವತಿಯಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಮಿತಿಯ ಏಕಾಂತಪ್ಪ ತಿಳಿಸಿದ್ದಾರೆ.