ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು

ದಾವಣಗೆರೆ, ನ.21-  ಪೊಲೀಸರನ್ನು ನಿಂದಿಸಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್, ಸಾದಿಕ್, ಹುಸೇನ್ ಹಾಗೂ ಹುಸೇನ್ ಎಂಬ ನಾಲ್ವರ ವಿರುದ್ಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇದೇ ದಿನಾಂಕ 16ರ ರಾತ್ರಿ 11.45ರಲ್ಲಿ ಆಜಾದ್ ನಗರ ಠಾಣೆ ಪೊಲೀಸರು ಗಸ್ತಿನಲ್ಲಿದ್ದ ವೇಳೆ ಮಾಗಾನಹಳ್ಳಿ ರಸ್ತೆಯ ಕ್ರೈಸ್ತರ ಸ್ಮಶಾನದ ಬಳಿಯ ರಸ್ತೆಯಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್ ಪುತ್ರ ಹಸನ್ ರಸ್ತೆಯಲ್ಲಿ 4–5 ಯುವಕರೊಂದಿಗೆ ಬೈಕ್‌ನಲ್ಲಿ ನಿಂತಿದ್ದರು. ಪೊಲೀಸರು ಮನೆಗೆ ಹೋಗಿ ಎಂದಿದ್ದಾರೆ. ಆದರೆ, ಯುವಕರು ಹೋಗುವುದಿಲ್ಲ ಎಂದಾಗ ಪೊಲೀಸ್ ಕಾನ್‌ ಸ್ಟೇಬಲ್‌ ಮೊಬೈಲ್‌ನಲ್ಲಿ ಫೋಟೋ ತೆಗೆದಿದ್ದಾರೆ. ಆಗ ಅದಕ್ಕೆ ಅಡ್ಡಿ ವ್ಯಕ್ತಪಡಿಸಿದ ಹಸನ್‌ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಿಪಿಐ ಇಮ್ರಾನ್ ಪಾಷಾ ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟೊತ್ತಿಗೆ ಅಲ್ಲಿದ್ದ ಅಯೂಬ್ ಪೈಲ್ವಾನ್ ಹಾಗೂ ಸಹೋದರ ಸಾಧಿಕ್ ಪೈಲ್ವಾನ್, 11 ಗಂಟೆ ಬಳಿಕ ಯಾರೂ ಓಡಾಡಬಾರದು ಎಂದು ಯಾವ ಕಾನೂನಿನ ಲ್ಲಿದೆ ಎಂದು ಸಿಪಿಐ ಅವರೊಂದಿಗೆ ವಾಗ್ವಾದ ನಡೆಸಿ ದ್ದಾರೆ. ಈ ಹಿನ್ನೆಲೆಯಲ್ಲಿ ಅಯೂಬ್ ಪೈಲ್ವಾನ್, ಸಾಧಿಕ್ ಪೈಲ್ವಾನ್, ಅಯೂಬ್ ಪೈಲ್ವಾನ್ ಪುತ್ರರಾದ ಹಸನ್ ಹಾಗೂ ಹುಸೇನ್ ವಿರುದ್ಧ ಪ್ರಕರಣ ದಾಖಲಾಗಿದೆ.

error: Content is protected !!