ಹರಿಹರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಎಸ್.ಜೆ.ವಿ.ಪಿ. ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಸಹಯೋಗದೊಂದಿಗೆ ಎಸ್.ಜೆ.ವಿ.ಪಿ ಕಾಲೇಜು ಸಭಾಂಗಣದಲ್ಲಿ ಇಂದು ಬೆಳಗ್ಗೆ 10-30 ಕ್ಕೆ ಶ್ರೀಶೈಲ ಜಗದ್ಗುರು ಶ್ರೀ ವಾಗೀಶ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ 51 ನೇ ಜನ್ಮ ದಿನ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶಾಲಾ- ಕಾಲೇಜು ಅಂಗಳದಲ್ಲಿ ಸಾಹಿತೋತ್ಸವ, ದತ್ತಿ ಕಾರ್ಯಕ್ರಮ ನಡೆಯಲಿದೆ.
ಎಸ್.ಜೆ.ವಿ.ಪಿ. ವಿದ್ಯಾಪೀಠ, ಪಂಕಜ ಬಿ.ಕೆ. ಆರ್.ಸ್ವಾಮಿ, ಜಿ.ಎಂ. ಸರ್ವಮಂಗಳಮ್ಮ , ಜಿ.ಎಂ. ಮಲ್ಲಿಕಾರ್ಜುನ ಸ್ವಾಮಿ ದತ್ತಿ ದಾನಿಗಳಾಗಿದ್ದಾರೆ. ಎಸ್.ಜೆ.ವಿ.ಪಿ ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಡಿ.ಎಂ. ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಆರ್. ಟಿ. ಪ್ರಶಾಂತ್ ದುಗ್ಗತ್ತಿಮಠ ಉಪಸ್ಥಿತರಿರುವರು.
ವಾಗೀಶ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಜೀವನ ಸಾಧನೆ ಕುರಿತು ಸಾಹಿತ್ಯ ಸಂಗಮ ಅಧ್ಯಕ್ಷ ವಿ.ಬಿ. ಕೊಟ್ರೇಶ್ ಉಪನ್ಯಾಸ ನೀಡುವರು.ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಂ.ಚಿದಾನಂದ ಕಂಚಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ರವಿಚಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಎಸ್.ಜೆ.ವಿ.ಪಿ. ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕರಾದ ಎನ್.ಎಂ. ತಿಪ್ಪೇಸ್ವಾಮಿ, ಗಿರೀಶ್ ಹೆಗ್ಗಪ್ಪನವರ್, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ಮುಖಂಡರಾದ ಬಂಡೇರ್ ತಿಮ್ಮಣ್ಣ, ಸಿ.ಎನ್. ಹುಲುಗೇಶ್, ಹೆಚ್.ನಿಜಗುಣ, ಹೆಚ್.ಸಿ. ಕೀರ್ತಿಕುಮಾರ್ ಭಾಗವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಎಂ. ಮಂಜುನಾಥ್ ವಹಿಸಲಿದ್ದಾರೆ.