ದಾವಣಗೆರೆ ಜಿಲ್ಲೆಯಲ್ಲಿಯೂ ಸಹ ಕನ್ನಡ ಭಾಷೆಗೆ ಅಗ್ರಸ್ಥಾನ ಸಿಗಲಿ

ದಾವಣಗೆರೆ ಜಿಲ್ಲೆಯಲ್ಲಿಯೂ ಸಹ ಕನ್ನಡ ಭಾಷೆಗೆ ಅಗ್ರಸ್ಥಾನ ಸಿಗಲಿ

ದಾವಣಗರೆ, ನ. 16 – ಕನ್ನಡ ಭಾಷೆಗೆ ಅಗ್ರಸ್ಥಾನ ನೀಡಬೇಕು ಎಂಬ ಬೆಂಗಳೂರು ಮಹಾನಗರ ಪಾಲಿಕೆ ಹೊರಡಿಸಿರುವ ಆದೇಶದಂತೆ ದಾವಣಗೆರೆ ನಗರ ಹಾಗು ಜಿಲ್ಲಾಯಾದ್ಯಂತ ಕಡ್ಡಾಯವಾಗಿ ಜಾರಿಗೆ ಬರುವಂತೆ, ಎಲ್ಲಾ ಮನೆ ಅಂಗಡಿ, ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕಗಳೇ ರಾರಾಜಿಸುವಂತಿರಲಿ ಎಂದು  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ ಆಶಯ ವ್ಯಕ್ತಪಡಿಸಿದರು. ಸರ್ವರಲ್ಲಿಯೂ ಹಾಗೂ ಮುಖ್ಯವಾಗಿ ಜಿಲ್ಲಾಡಳಿತ, ನಗರಾಡಳಿತ ಮತ್ತು ಪಂಚಾಯ್ತಿ ಮಟ್ಟಗಳಲ್ಲಿ ಕೂಡಲೇ ಆದೇಶ ಹೊರಡಿಸಿ ಅನುಷ್ಠಾನಗೊಳಿಸುವಂತೆ  ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

error: Content is protected !!