ನಗರದ ಸೋಮೇಶ್ವರ ಶಾಲೆಯಲ್ಲಿ ಇಂದು ಚದುರಂಗ ಸ್ಪರ್ಧೆ

ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಇಂದು ಬೆಳಿಗ್ಗೆ 9.30 ಕ್ಕೆ ಜಿಲ್ಲಾ ಮಟ್ಟದ ಅಂತರ ಶಾಲಾ ಮಟ್ಟದ ಚದುರಂಗ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಆಸಕ್ತ ಶಾಲಾ ವಿದ್ಯಾರ್ಥಿಗಳು  ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ `ಸೋಮೇಶ್ವರ ಚದುರಂಗ ಸಿರಿ’ ಪ್ರಶಸ್ತಿ ಹಾಗೂ 5 ಸಾವಿರ ರೂಪಾಯಿ ನೀಡಲಾಗುವುದು. ದ್ವಿತೀಯ ಬಹುಮಾನ ಪ್ರಶಸ್ತಿ ಪತ್ರದೊಂದಿಗೆ 3 ಸಾವಿರ ರೂ. ನೀಡಿ ಗೌರವಿಸಲಾಗುವುದೆಂದು ಶಾಲೆಯ ಗೌರವ ಕಾರ್ಯದರ್ಶಿ ಕೆ.ಎಂ ಸುರೇಶ್ ತಿಳಿಸಿದ್ದಾರೆ.

error: Content is protected !!