ದಾವಣಗರೆ, ನ. 16 – ನಗರದ ಯೂರೋ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಬಾಡ ರಸ್ತೆಯಲ್ಲಿರುವ ವೀರೇಶ್ವರ ಪುಣ್ಯಾಶ್ರಮದ ಮಕ್ಕಳ ವಾಸ್ತವ್ಯಕ್ಕಾಗಿ ಕೊಠಡಿ ನಿರ್ಮಾಣದ ಕಾರ್ಯಕ್ಕೆ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು (26,000 ರೂ.) ಧನ ಸಹಾಯ ಮಾಡಿದ್ದಾರೆ. ಪುಣ್ಯಾಶ್ರಮದ ಮಕ್ಕಳನ್ನು ಶಾಲೆಗೆ ಆಹ್ವಾನಿಸಿ ಎಲ್ಲರ ಸಮ್ಮುಖದಲ್ಲಿ 26,000 ರೂ.ಗಳನ್ನು ದೇಣಿಗೆ ನೀಡಲಿದ್ದಾರೆ.
January 12, 2025