ಬೈಕ್ ಕಳ್ಳತನ ಆರೋಪಿ ಬಂಧನ: 4 ಬೈಕ್‌ಗಳು ವಶ

ದಾವಣಗೆರೆ, ನ.13- ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ 1.45 ಲಕ್ಷ ರೂ. ಮೌಲ್ಯದ ನಾಲ್ಕು ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.

ಫೋಟೋ ಫ್ರೋಮ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮುಕ್ತಿಯಾರ್ ಖಾನ್ (30) ಬಂಧಿತ. ಈತನನ್ನು ವಿಚಾರಣೆಗೆ ಒಳಪಡಿಸಿದಾಗ  ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಬೈಕ್, ಗಾಂಧಿನಗರ ಪೊಲೀಸ್ ಠಾಣೆ ಮತ್ತು ಹರಿಹರ ನಗರ ಪೊಲೀಸ್ ಠಾಣೆಯ ತಲಾ ಒಂದು ಒಟ್ಟು 4 ಬೈಕ್  ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬಡಾವಣೆ ಪೊಲೀಸ್ ಠಾಣೆ ಪಿ.ಎಸ್.ಐ ನಾಗರಾಜಪ್ಪ ಬಿ.ಆರ್  ಮತ್ತು ಎಎಸ್‌ಐ ರಾಜಪ್ಪ ಎಸ್.ಬಿ, ಸಿಬ್ಬಂದಿಗಳಾದ ಸಿದ್ದೇಶ್, ಅರುಣ ಕುಮಾರ್, ಸೈಯದ್ ಅಲಿ, ಹನುಮಂತಪ್ಪ, ವಿಶ್ವನಾಥ, ಗೀತಾ ಅವರನ್ನೊಳಗಂಡ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

error: Content is protected !!