ದಾವಣಗೆರೆ, ನ. 12 – ದೀನ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಪ್ರಸಕ್ತ ಸಾಲಿನ ವಿವಿಧ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಹರಿಹರ ನಗರ-ಸಭೆ ಕಚೇರಿಯಲ್ಲಿ ಅರ್ಜಿ ನಮೂನೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 2ರ ಒಳಗಾಗಿ ಅದೇ ಕಛೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಹರಿಹರ ನಗರ ಸಭೆಯ ಸಂಬಂಧಿತ ಶಾಖೆಯನ್ನು ಭೇಟಿ ಮಾಡಲು ಪೌರಾಯುಕ್ತ ಬಸವರಾಜ ತಿಳಿಸಿದ್ದಾರೆ.