ದಾವಣಗೆರೆ, ನ.9- ಆಧಾರ್ ಕಾರ್ಡ್ ತಿದ್ದು ಪಡಿ ಅಥವಾ ನವೀಕರಣ ಅರ್ಜಿಗೆ ಪತ್ರಾಂಕಿತ ಅಧಿ ಕಾರಿಯಂತೆ ಸೀಲು ಹಾಗೂ ಸಹಿ ನಕಲು ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುಟಗನಾಳ್ ಗ್ರಾಮದ ಬಸವರಾಜಪ್ಪ (70) ಬಂಧಿತ ಆರೋಪಿ. ಈತನಿಂದ ಕೃತ್ಯಕ್ಕೆ ಉಪಯೋಗಿ ಸಿದ ನಕಲಿ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗ ಆಧಾರ್ ತಿದ್ದುಪಡಿ ಅರ್ಜಿ ನಮೂನೆಯಲ್ಲಿ ಪತ್ರಾಂಕಿತ ಅಧಿಕಾರಿಯ ದೃಢೀಕರಣ ಮಾಡುವಾಗ ಪತ್ರಾಂಕಿತ ಅಧಿಕಾರಿಯ ಸಹಿ ಮತ್ತು ಸೀಲು ಹಾಕುವ ಸ್ಥಳದಲ್ಲಿ ನಾನು ಸೃಷ್ಟಿಸಿಕೊಂಡ `ಹಿರಿಯ ತಜ್ಞರು. ಸಿ.ಜಿ.ಹೆಚ್. ದಾವಣಗೆರೆ’ ಎಂದು ನಕಲು ಸೀಲನ್ನು ಹಾಕಿ ನಾನೇ ಪತ್ರಾಂಕಿತ ಅಧಿಕಾರಿ ಎಂದು ಹಸಿರು ಶಾಯಿಯಿಂದ ನಕಲು ಸಹಿ ಮಾಡಿರುತ್ತೇನೆ ಎಂದು ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ನ.7ರಂದು ಮುಖ್ಯ ಅಂಚೆ ಪಾಲಕ ಸದ್ಯೋಜಾತಪ್ಪ ಅವರು ಕರ್ತವ್ಯದಲ್ಲಿದ್ದಾಗ ಆರೋಪಿ ನಕಲು ಸಹಿ ಮಾಡಿವುದು ಕಂಡು ಬಂದಿದ್ದು, ಕಾನೂನು ಕ್ರಮ ಜರುಗಿಸುವಂತೆ ದೂರು ದಾಖಲಿಸಿದ್ದರು.
ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಹೆಚ್ ಗುರುಬಸವರಾಜ್ ನೇತೃತ್ವದಲ್ಲಿ ಪಿಎಸ್‌ಐ ಜಿ. ನಾಗರಾಜ್, ಎಎಸ್‌ಐ ಶಿವಪ್ಪ ಜಿ.ಆರ್, ಮಹಮದ್ ರಫಿ, ಗಿರೀಶ್ ಬಿ.ಪಿ, ಶ್ರೀಮತಿ ಕವಿತಾ, ಅಣ್ಣಯ್ಯ ಲಮಾಣಿ, ಅಮರೇಶ್ ಸಂಗಮ್ ಆರೋಪಿ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.